ಮಲೇಬೆನ್ನೂರು, ಫೆ.11- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಶಾಂತಿ – ಸುವ್ಯವಸ್ಥೆ ಬಲ ಪಡಿಸುವ ದೃಷ್ಟಿಯಿಂದ ಪಟ್ಟಣದಲ್ಲಿ ಇಂದು ಬೆಳಿಗ್ಗೆ ನಡೆದ ಪೊಲೀಸ್ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.
ಎ.ಕೆ.ಕಾಲೋನಿ ಮಾರ್ಗವಾಗಿ ಬಸವೇಶ್ವರ ಬಡಾವಣೆ, ಸಂತೆ ರಸ್ತೆ, ಬನ್ನಿ ಮಂಟಪ ವೃತ್ತ, ಶಾದಿಮಹಲ್, ಆಜಾದ್ ನಗರ, ಜಿಗಳಿ ವೃತ್ತ, ಕನಕದಾಸ ರಸ್ತೆ, ಎಸ್.ಹೆಚ್.ರಸ್ತೆಯಿಂದ ಪುನಃ ಪೊಲೀಸ್ ಠಾಣೆಗೆ ಸಾಗಿತು. ಆರ್ಎಎಫ್, ಕೆಎಸ್‌ಆರ್‌ಪಿ, ಕ್ಯೂಆರ್‌ಪಿ, ದುರ್ಗಾಪಡೆ, ಗೃಹರಕ್ಷಕ ದಳ ಮತ್ತು ಪೊಲೀಸ್ ಸಿಬ್ಬಂದಿಗಳು ಪಥ ಸಂಚಲನದ ಮೂಲಕ ಜನರಲ್ಲಿ ಭಯದ ವಾತಾವರಣ ದೂರ ಮಾಡಿ ಕಾನೂನು – ಸುವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಿದರು.
ಎಎಸ್ಪಿ ರಾಮಗೊಂಡ ಬಸರಗಿ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ಡಿಆರ್ ಡಿವೈಎಸ್ಪಿ ಹಿಂಡಸಘಟ್ಟಿ ಪ್ರಕಾಶ್, ಸಿಪಿಐ ಸತೀಶ್, ಪಿಎಸ್ಐ ರವಿಕುಮಾರ್ ಅವರು ಪಥ ಸಂಚಲನದ ನೇತೃತ್ವ ವಹಿಸಿದ್ದರು.