ದಾವಣಗೆರೆ, ಫೆ.2- ನಗರದ ಮಾರುತಿ ಶಾಲೆಯ ದೈಹಿಕ ಶಿಕ್ಷಕ ರವಿಕುಮಾರ್ ಅವರು ನಿವೃತ್ತಿ ಹೊಂದಿದ್ದು, ನಗರದಲ್ಲಿ ಬಾಲ್ ಬ್ಯಾಟ್ ಮಿಂಟನ್ ಆಟವನ್ನು ಬೆಳಿಸಿ, ರಾಜ್ಯ ಹಾಗೂ ಅಂತರಾಜ್ಯ ಮಟ್ಟದಲ್ಲಿ ಆಟ ಆಡುತ್ತಿರುವ ಕುಮಾರಸ್ವಾಮಿ, ಮಧುಸೂದನ್, ಹರೀಶ್ ರೆಡ್ಡಿ, ಶಶಿಕುಮಾರ್ ಇನ್ನಿತರೇ ಆಟಗಾರರನ್ನು ಬೆಳಿಸಿದ ಕೀರ್ತಿ ರವಿಕುಮಾರ್ ಸಲ್ಲುತ್ತದೆ.
ಈ ಸಂದರ್ಭದಲ್ಲಿ ರವಿಕುಮಾರ್ ಅವರಿಗೆ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಪದಾಧಿಕಾರಿಗಳು ಶಾಲು ಹೊದಿಸಿ, ಸನ್ಮಾನಿಸಿದರು.