ತರಳಬಾಳು ಕೃಷಿ ಕೇಂದ್ರದಿಂದ ಎಣ್ಣೆಕಾಳು ಬೆಳೆಗಳ ಪ್ರಾತ್ಯಕ್ಷಿಕೆ

ಜಗಳೂರು, ಜ.17- ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ರಾಷ್ಟ್ರೀಯ ಎಣ್ಣೆಕಾಳು ಯೋಜನೆಯ ಗುಚ್ಛ ಗ್ರಾಮಗಳ ಮುಂಚೂಣಿ ಪ್ರಾತ್ಯಕ್ಷಿಕೆಯ ಸಮಗ್ರ ಬೆಳೆ ನಿರ್ವಹಣೆ ಶೇಂಗಾ ತಾಕುಗಳಿಗೆ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿದರು. 

ಬೇಸಾಯ ತಜ್ಞ ಮಲ್ಲಿಕಾರ್ಜುನ್ ಅವರು, ಶೇಂಗಾ ಬೆಳೆಯ ನವೀನ ತಿಳಿಯಾದ G2 52 ಉತ್ತಮವಾಗಿ ಮೊಳಕೆ ಹೊಡೆದಿದ್ದು,  15 ದಿನಗಳಾದ ನಂತರ ಜಿಪ್ಸಂ 200 ಕೆಜಿ ಪ್ರತಿ ಎಕರೆಗೆ ಬಳಸಬೇಕೆಂದು ತಿಳಿಸಿದರು.

ಭೇಟಿಯ ಸಂದರ್ಭದಲ್ಲಿ ಎಂ.ಜಿ.ಬಸವನಗೌಡ, ರಘುರಾಜ್, ಪ್ರಗತಿಪರ ರೈತ ಮಹಾಂತೇಶ್ ಭಾಗವಹಿಸಿದ್ದರು.

error: Content is protected !!