ದಾವಣಗೆರೆ, ಜ. 9- ಆವರಗೆರೆಯ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆಯಲ್ಲಿ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಸಾವಿಗೀಡಾದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿ ಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್‍ನ ಸಂದರ್ಭ ದಲ್ಲಿ ರಾವತ್ ದೃಢ ನಿರ್ಧಾರದಿಂದ ಬೇರೆ ಯಾವುದೇ ರಾಷ್ಟ್ರ ಭಾರತ ವನ್ನು ಕೆಣಕುವಂತಹ ಧೈರ್ಯ ವನ್ನು ಮಾಡಲು ಹಿಂದೇಟು ಹಾಕುವಂತಹ ಮನಸ್ಥಿತಿಯನ್ನು ಹುಟ್ಟಿ ಹಾಕಿರುವ ಧೀಮಂತ ನಾಯಕನನ್ನು ನಮ್ಮ ದೇಶ ಕಳೆದುಕೊಂಡಿದೆ ಎಂದು ಕಂಬನಿ ಮಿಡಿದರು. ಶಿಕ್ಷಕಿ ದಿವ್ಯಶ್ರೀ ಮಾತನಾಡಿ, ಬಿಪಿನ್ ರಾವತ್ ಅವರು 2011 ರಲ್ಲಿ ಭೂ, ವಾಯು, ಜಲ, ಸೇನೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿ ಭಾರತೀಯ ಸೇನೆಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ.
ಪ್ರಗತಿಪರ ರೈತ ಪರಮೇಶ್ವರಪ್ಪ, ಕಿತ್ತೂರು ರೇವಣ್ಣ, 10ನೇ ತರಗತಿ ವಿದ್ಯಾರ್ಥಿನಿ ಕು. ಶ್ರೀದೇವಿ, ರಾವತ್ ಅವರ ಬಗ್ಗೆ ಮಾತನಾಡಿದರು.