ರಾಮೇಶ್ವರ : ಪೌಷ್ಟಿಕ ಕೈತೋಟದ ತರಬೇತಿ

ನ್ಯಾಮತಿ, ಜ.9- ದಾವಣಗೆರೆಯ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಪೌಷ್ಟಿಕ ಕೈತೋಟದ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕೇಂದ್ರದ ತೋಟಗಾರಿಕೆ ವಿಜ್ಞಾನಿಗಳಾದ ಎಂ.ಜಿ. ಬಸವನಗೌಡ, ಡಾ. ಸುಪ್ರಿಯಾ ಪಿ. ಪಾಟೀಲ, ಡಾ. ದೇವರಾಜ ಟಿ.ಎನ್.  ಅವರುಗಳು  ಮಾತನಾಡಿ ಪೌಷ್ಟಿಕ ಕೈತೋಟದ ಮಹತ್ವ  ತಿಳಿಸಿದರು. ಕಾರ್ಯಕ್ರಮದಲ್ಲಿ 30 ಜನ ರೈತ ಮಹಿಳೆಯರಿಗೆ ಪೌಷ್ಟಿಕ ಕೈತೋಟಕ್ಕೆ ಬೇಕಾಗಿರುವ ಬೀಜಗಳು ಮತ್ತು ಬೇವಿನ ಎಣ್ಣೆಯನ್ನು ವಿತರಿಸಲಾಯಿತು. ಪ್ರಗತಿಪರ ರೈತ ರಾಕೇಶ್ ಹಾಗೂ ರೈತ ಮಹಿಳೆಯರಾದ ಯಶೋಧಮ್ಮ, ಪಾರ್ವತಮ್ಮ ಮತ್ತು ಇತರರು ಭಾಗವಹಿಸಿದ್ದರು.

error: Content is protected !!