ಹರಿಹರ, ಫೆ.16- ನಗರದ ಇಂದ್ರಾನಗರ ಬಡಾವಣೆಯ ಪಾರ್ಕ್ ಆವರಣದಲ್ಲಿರುವ ಶ್ರೀ ಗ್ರಾಮದೇವತೆ ಊರಮ್ಮ ದೇವಿ ದೇವಸ್ಥಾನದಲ್ಲಿ, ನೂತನವಾಗಿ 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಊರಮ್ಮ ದೇವಿಯ ಶಿಲಾ ಮೂರ್ತಿಯನ್ನು, ನಾಡಿದ್ದು ದಿನಾಂಕ 18 ರಂದು ಪ್ರಾಣಪ್ರತಿಷ್ಠಾಪನೆ ಅಂಗವಾಗಿ, ಇಂದು ನಗರದ ತುಂಗಭದ್ರಾ ನದಿಯಲ್ಲಿ ಶಿಲಾ ಮೂರ್ತಿಗೆ ಗಂಗಾ ಸ್ನಾನ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿ, ತದನಂತರ ಮಹಿಳೆಯರ ಕುಂಭಮೇಳದೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತರಲಾಯಿತು.
ಮೆರವಣಿಗೆಯಲ್ಲಿ ಸಮಾಳ, ಡ್ರಮ್ ಸೆಟ್, ಬ್ಯಾಂಡ್ ಸೆಟ್ ಸೇರಿದಂತೆ ಇತರೆ ಕಲಾಮೇಳಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗನ್ನು ನೀಡಿದವು.
ಮೆರವಣಿಗೆ ನಗರದ ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಿಂದ ಪ್ರಾರಂಭಗೊಂಡು, ಹಳೇ ಪಿ.ಬಿ. ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ, ಸಾರ್ವಜನಿಕ ಆಸ್ಪತ್ರೆ ರಸ್ತೆಯ ಮೂಲಕ ಹಾದು, ಇಂದ್ರಾನಗರದ ಊರಮ್ಮ ದೇವಿ ದೇವಸ್ಥಾನದಲ್ಲಿ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ, ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್, ನಾಗರಾಜ್ ಪರ್ಕಿ,
ವೆಂಕಟೇಶ್, ಮಂಜುನಾಥ್ ಚಿಂಚಲಿ, ಸಿದ್ದೇಶ್ ಬೇಡರ್, ಕೃಷ್ಣಮೂರ್ತಿ, ರಂಗೋಜಿರಾವ್, ವಕೀಲರು ಮಾರುತಿ ಬೇಡರ್, ಹೊನ್ನಪ್ಪ ಬೇಡರ್, ಸಿದ್ದಪ್ಪ ಇತರರು ಹಾಜರಿದ್ದರು.