ದಾವಣಗೆರೆ, ಫೆ.16- ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಗರದ ಅಮರ್ ಜವಾನ್ ಪಾರ್ಕ್‌ನಲ್ಲಿ ಪುಲ್ವಾಮಾ ಕರಾಳ ದಿನ ಆಚರಿಸಲಾಯಿತು.
ಸ್ಕೌಟ್ ಮತ್ತು ಗೈಡ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವೀರ ಯೋಧರಿಗೆ ಪುಷ್ಪ ನಮನ ಸಲ್ಲಿಸಿ ಜೈಕಾರ ಕೂಗಿದರು.
ಈ ವೇಳೆ ಜಿಲ್ಲಾ ಸ್ಕೌಟ್ ಆಯುಕ್ತ
ಎ.ಪಿ ಷಡಾಕ್ಷರಪ್ಪ ಮಾತನಾಡಿ, ದೇಶದ ಯೋಧರನ್ನು, ಉಗ್ರಗಾಮಿಗಳು ಮೋಸದಿಂದ ಇಡೀ ಬಸ್ಸನ್ನು ಸ್ಫೋಟಿಸಿ ಹತ್ಯೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸುಬೇದಾರ್ ಮಲ್ಲನಗೌಡ ಪಾಟೀಲ್ ಮಾತನಾಡಿ, ರೈತರು ಮತ್ತು ಸೈನಿಕರು ದೇಶದ ಆಸ್ತಿಯಾಗಿದ್ದಾರೆ.
ಗಾಳಿ-ಮಳೆ, ಚಳಿ-ಬಿಸಿಲನ್ನು ಲೆಕ್ಕಿಸದ ಸೈನಿಕರು, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಇವರ ಅಮರ ತ್ಯಾಗದಿಂದಲೇ ದೇಶದಲ್ಲಿನ ನಾವು ನೆಮ್ಮದಿಯ ಉಸಿರು ಹಾಕುತ್ತಿದ್ದೇವೆ ಎಂದು ಯೋಧರನ್ನು ಸ್ಮರಿಸಿದರು.
ಜಿಲ್ಲಾ ಸಹಾಯಕ ಆಯುಕ್ತ ಎನ್.ಕೆ. ಕೊಟ್ರೇಶ್, ಕಾರ್ಯದರ್ಶಿ ಎಂ.ರತ್ನ, ಎ.ಎಲ್.ಟಿ. ಕ್ಲಬ್ ಕುಮಾರಸ್ವಾಮಿ, ಹೆಚ್.ಡಬ್ಲ್ಯೂ.ಬಿ. ಸ್ಕೌಟ್ ಶ್ರೀನಿವಾಸ್, ಯುವ ಸಮಿತಿ ಸದಸ್ಯರಾದ ವಿಜಯ್, ದರ್ಶನ್, ತ್ಯಾಗರಾಜ್, ನಿತಿನ್, ವಿಜೇತ, ಅಕ್ಷತಾ, ಎಸ್.ಜಿ.ವಿ. ಅಶ್ವಿನಿ ಈ ಸಂದರ್ಭದಲ್ಲಿ ಹಾಜರಿದ್ದರು.