ಹರಿಹರ ತಹಶೀಲ್ದಾರ್ ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ

ಹರಿಹರ ತಹಶೀಲ್ದಾರ್ ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ

ಹರಿಹರ, ಫೆ.16- ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಯಿತು. 

ತಹಶೀಲ್ದಾರ್ ಗುರುಬಸವರಾಜ್ ಅವರು ಸಂತ ಸೇವಾಲಾಲ್  ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಪುಷ್ಪಾ, ಡಾ. ವಿಶ್ವನಾಥ್ ಕುಂದಗೋಳಮಠ,  ಶಿಕ್ಷಣ ಇಲಾಖೆಯ ಬಸವರಾಜಯ್ಯ,  ಆರೋಗ್ಯ ಇಲಾಖೆ ಎಂ. ಉಮ್ಮಣ್ಣ, ಎಎಸ್ಐ ಮನಸೂರು ಅಹ್ಮದ್, ಸಂತ ಸೇವಾಲಾಲ್ ಸಮಾಜದ ಮುಖಂಡ ಶಶಿನಾಯ್ಕ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!