ಬೆಳ್ಳೂಡಿ : ಮಗನ ಹುಟ್ಟುಹಬ್ಬದ ಅಂಗವಾಗಿ ಶಾಲೆಗೆ ಕೊಡುಗೆ ನೀಡಿದ ತಂದೆ

ಬೆಳ್ಳೂಡಿ : ಮಗನ ಹುಟ್ಟುಹಬ್ಬದ ಅಂಗವಾಗಿ ಶಾಲೆಗೆ ಕೊಡುಗೆ ನೀಡಿದ ತಂದೆ

ಮಲೇಬೆ ನ್ನೂರು, ಫೆ.15- ಬೆಳ್ಳೂಡಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಪೋಷಕರಾದ ಗ್ರಾಮದ ರಾಮಪ್ಪ ಮಡಿವಾಳರ್ ಇವರು, ತಮ್ಮ ಮಗ ವಿಕಾಸ್ ಹುಟ್ಟುಹಬ್ಬದ ಪ್ರಯುಕ್ತ 18 ಸಾವಿರ ರೂ. ಬೆಲೆಯ ಜೆರಾಕ್ಸ್  ಪ್ರಿಂಟರ್ ಅನ್ನು ದಾನವಾಗಿ ನೀಡಿದರು.  ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಬಿ.ವಿ.ತಿಪ್ಪೇಶ್, ಸಹ ಶಿಕ್ಷಕರಾದ ಮಂಜುನಾಥ್ ಕಡೇಮನಿ, ಜಿ.ಬಿ.ರವೀಂದ್ರನಾಥ್, ಶಶಿಕಲಾ ಪೂಜಾರ್, ಕಾವ್ಯ ಮತ್ತು ಪೂಜಾ ಇದ್ದರು.

error: Content is protected !!