ದಾವಣಗೆರೆ, ಡಿ. 27 – ಇಲ್ಲಿನ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಸಾಂಸ್ಕೃತಿಕ ಸಂಸ್ಥೆ ಸ್ಪಿಕ್ ಮ್ಯಾಕೆಯ ಮುಖ್ಯಸ್ಥ ಮಂಜುನಾಥ ರಂಗರಾಜು ನೇತೃತ್ವದಲ್ಲಿ ವಿಶಿಷ್ಟ ನೃತ್ಯ ಗೋಷ್ಠಿ ಜರುಗಿತು.
ನೃತ್ಯ ಗೋಷ್ಠಿಯಲ್ಲಿ ಮಾತನಾಡಿದ ನೃತ್ಯಶ್ರೀ ಸರಿತಾ ಮಿಶ್ರಾ ಅವರು, ದೇಶದಲ್ಲಿ ಅನೇಕ ನೃತ್ಯ ಕಲೆಗಳಿಗೆ, ಇಂತಹ ಅನೇಕ ಕಲೆಗಳಲ್ಲಿ ಓಡಿಸ್ಸಿ ನೃತ್ಯ ವಿಶೇಷವಾಗಿದೆ. ನೀವೂ ಸಹ ಇಂತಹ ನೃತ್ಯಗಳನ್ನು ಕಲಿಯುವ ಮೂಲಕ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಳ್ಳಿ ಎಂದು ಹೇಳಿದರು.
ಇದೇ ವೇಳೆ ಅವರು ಒಡಿಸ್ಸಿ ನೃತ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಜತೆಗೆ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ನೃತ್ಯದ ಭಾಗಗಳನ್ನು ಕಲಿಸಿದರು.
ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಮಾತನಾಡಿ, ಜಗತ್ತಿನಲ್ಲಿ ಸಂಗೀತ ಮತ್ತು ನೃತ್ಯಕ್ಕೆ ಮನ ಸೋಲದ ವ್ಯಕ್ತಿಯೇ ಇಲ್ಲ. ಇಂತಹ ಕಲೆಯನ್ನು ವಿದ್ಯಾರ್ಥಿಗಳು ಪಠ್ಯದ ಜತೆಗೆ ಇದನ್ನೂ ಕಲಿತು, ನೃತ್ಯ ಕಲೆ ಉಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯೆ ಜೆ.ಎಸ್ ವನಿತಾ, ಶೈಕ್ಷಣಿಕ ಮುಖ್ಯಸ್ಥ ಎಂ. ವಾಸಿಮ್ ಪಾಷಾ, ಪ್ರೌಢಶಾಲಾ ವಿಭಾಗದ ಪ್ರಭಾರಿ ಪಿ.ವಿ. ಪ್ರಭು, ಪ್ರಾಥಮಿಕ ವಿಭಾಗದ ಪ್ರಭಾರಿ ಶೀಭಾರಾಣಿ ಮತ್ತು ವಿದ್ಯಾರ್ಥಿಗಳಿದ್ದರು.