ಯೋಗಾಸನ ಸ್ಪರ್ಧೆ : ಕರಿಬಸಪ್ಪಗೆ ಸನ್ಮಾನ

ಯೋಗಾಸನ ಸ್ಪರ್ಧೆ : ಕರಿಬಸಪ್ಪಗೆ ಸನ್ಮಾನ

ಹೊನ್ನಾಳಿ , ಡಿ.26 – ತಾಲ್ಲೂಕಿನ ಕುಂದೂರು ಗ್ರಾಮದ ಶಿಕ್ಷಕ ಕೆ.ಜಿ ಕರಿಬಸಪ್ಪ ಥೈಲ್ಯಾಂಡ್‍ನ ಲ್ಲಿ ನಡೆದ ಅಂತರ ರಾಷ್ಟೀಯ ಯೋಗಾಸನ ಸ್ಪರ್ಧೆಯ ಶಿಬಿರದಲ್ಲಿ ದ್ವಿತಿಯ ಸ್ಥಾನ ಪಡೆದು ಬೆಳ್ಳಿ ನಾಣ್ಯದ ಪದಕ ಪ್ರಶಸ್ತಿಗೆ ಭಾಜನರಾದ ಇವರನ್ನು ಹೊನ್ನಾಳಿ ತಾಲ್ಲೂಕು ತಹಶೀಲ್ದಾರ್‌ ಪಟ್ಟರಾಜೇಗೌಡರು ಸನ್ಮಾನಿಸಿ ಗೌರವಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯಕ್ಕನ ಹಳ್ಳಿಯಲ್ಲಿ ಸಹಶಿಕ್ಷಕರಾಗಿ ಕರಿಬಸಪ್ಪನವರು 50 ರಿಂದ 60 ವರ್ಷದ ಯೋಗಾಸನ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿದಿಸಿದ್ದರು. 

ತಾಲ್ಲೂಕಿಗೆ ಗೌರವತಂದ ಇವರ ಸಾಧನೆಗೆ  ಶಾಸಕ ಶಾಂತನಗೌಡರು ಮೆಚ್ಚುಗೆ ವ್ಯಕ್ತಪಡಿಸಿರುವರು. ಇವರನ್ನು ಬರುವ ಜ. 26ರ ಗಣರಾಜ್ಯೋತ್ಸವದಂದು ತಾಲ್ಲೂಕು ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದೆಂದು ತಹಶೀಲ್ದಾರ್‌ ತಿಳಿಸಿರುವರು.

error: Content is protected !!