ದಾವಣಗೆರೆ, ಡಿ. 26 – ಸಮಯದ ಸದುಪಯೋಗ ಹಾಗೂ ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಿಗಲಿದೆ ಎಂದು ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್‌ನ ಸಹ ಪ್ರಾಧ್ಯಾಪಕ ಮಂಜುನಾಥ ಬೆಲ್ಲದ ತಿಳಿಸಿದರು.
ಇಲ್ಲಿನ ವಿನೋಬನಗರದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ `ಕ್ರೀಡಾ ಮತ್ತು ಸಾಂಸ್ಕೃತಿಕ’ ಸಮಾರೊಪದಲ್ಲಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಚೆಸ್ ವಿಜೇತ ಗುಖೇಶ್ ಸಾಧನೆಗೆ ಸತತ ಪ್ರಯತ್ನವೇ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಟ್ಟ ಗುರಿಯೆಡೆಗೆ ಸತತ ಪ್ರಯತ್ನ ನಡೆಸುವಂತೆ ಕಿವಿಮಾತು ಹೇಳಿದರು.
ಸಂಸ್ಥೆಯ ಸಹ ಕಾರ್ಯದರ್ಶಿ ಸೌಮ್ಯ ಬಸವರಾಜ್ ಮಾತನಾಡಿ, ಓದು ಜೀವನ ಬದಲಿಸಲಿದೆ. ಹಾಗಾಗಿ ಓದಿನಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ತೊಡಗಬೇಕು ಎಂದ ಅವರು, ಓದಿಗೆ ತಕ್ಕ ಪ್ರತಿ ಫಲವನ್ನು ಫಲಿತಾಂಶದಲ್ಲಿ ಕಾಣಬಹುದು ಎಂದು ಹೇಳಿದರು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಮನೋಹರ್ ಚಿಗಟೇರಿ, ಶಾಲೆಯ ಮುಖ್ಯಶಿಕ್ಷಕ ನಾಗರಾಜ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಸ್.ಎಂ. ಶೈಲಜಾ, ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಆರ್. ವಾಗ್ದೇವಿ, ಎಂ.ಟಿ. ಮಳಗಿ, ಸಂಸ್ಥೆಯ ಸದಸ್ಯೆ ಸುಮಂಗಲಮ್ಮ ಚಿಗಟೇರಿ ಇದ್ದರು.