ಹರಿಹರ, ಡಿ.26 – ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸಿಪಿಐ ಪಕ್ಷದ ವತಿಯಿಂದ ಈಚೆಗೆ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಮಿತ್ ಷಾ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿ, ಶಿರಸ್ತೇದಾರರಿಗೆ ಮನವಿ ಅರ್ಪಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ನಾಗರಾಜಪ್ಪ, ಕಾಂಗ್ರೆಸ್ ಮುಖಂಡ ವೈ. ರಘುಪತಿ, ಸನಾವುಲ್ಲಾ, ಡಿ.ಎಸ್.ಎಸ್ ಹನುಮಂತಪ್ಪ ಕೊತ್ವಾಲ, ಡಿ. ಹನುಮಂತಪ್ಪ, ಶ್ರೀನಿವಾಸ್ ಕೊಡ್ಲಿ, ಬಿ.ಹೆಚ್. ಚಂದ್ರಪ್ಪ, ಪರಮೇಶ್ವರಪ್ಪ, ನಾಗರಾಜ್ ಹಿತ್ತಲಮನೆ, ಕುಮಾರ್ ನಾಯ್ಕ್, ಕಿರಣ್ ಕುಮಾರ್ ಇತರರು ಇದ್ದರು.