ದಾವಣಗೆರೆ, ಡಿ. 26 – ಈಚೆಗೆ ಬೆಂಗಳೂರಿನಲ್ಲಿ ನಡೆದ 28ನೇ ಸೌತ್ ಜೋನ್ ಚಾಂಪಿಯನ್‌ಶಿಪ್‌ನಲ್ಲಿ ದಾವಣಗೆರೆ ಕ್ರೀಡಾ ರೋಹಣದ ಕ್ರೀಡಾ ಪಟುಗಳು ಜ್ಯೂನಿಯರ್ ವಿಭಾಗದಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
ಲೀಡ್ ಕ್ಲೈಂಬಿಂಗ್ ಮತ್ತು ಸ್ಪೀಡ್ ಕ್ಲೈಂಬಿಂಗ್‌ನಲ್ಲಿ ಡಿ. ಛಾಣಸ್ಯ ದ್ವಿತೀಯ ಮತ್ತು ಬೋಟ್ಲರಿಂಗ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಲೀಡ್ ಕ್ಲೈಂಬಿಂಗ್ ಮತ್ತು ಸ್ಪೀಡ್ ಕ್ಲೈಂಬಿಂಗ್‌ನಲ್ಲಿ ಗಂಗಾ ವೈಷ್ಣವಿ, ವಿ. ನಾಗ್ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.