ಹರಿಹರ, ಡಿ. 25 – ಹುಬ್ಬಳ್ಳಿ ಸಮೀಪದ ತಡಸಾ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಹರಿಹರದ ನಿವೃತ್ತ ಬಿರ್ಲಾ ಕಂಪನಿಯ ನೌಕರ ಸಿ.ಕೆ. ರುದ್ರುಮನಿ ಸ್ವಾಮಿಯವರ ಪುತ್ರ ಮಹೇಶ್ (41), ಪತ್ನಿ ಅಶ್ವಿನಿ ಮಹೇಶ್ (39), ಪುತ್ರ ಎಂ. ಧನ್ವಿನ್ (11) ಹಾಗೂ ಮಹೇಶ್ ಅವರ ಅತ್ತೆ ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಒಟ್ಟು ನಾಲ್ವರು ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇವರು ಹರಿಹರ ವಿದ್ಯಾನಗರದ `ಸಿ’ ಬ್ಲಾಕ್, 9 ಕ್ರಾಸ್ ನಿವಾಸಿಗಳು.
ರಸ್ತೆ ಅಪಘಾತದಲ್ಲಿ ಹರಿಹರದ ಒಂದೇ ಕುಟುಂಬದ ನಾಲ್ವರ ಸಾವು
