ದಾವಣಗೆರೆ, ಡಿ. 25- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಅನ್ವೇಷಣೆ ಪ್ರಕಾಶನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಯು.ಆರ್.ಅನಂತಮೂರ್ತಿ ಅವರ 92ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್ ಅವರು ಅನಂತಮೂರ್ತಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ, ಅನಂತಮೂರ್ತಿ ಕನ್ನಡ ಸಾರಸ್ವತ ಲೋಕದ ಮಹತ್ವ ಲೇಖಕರಾಗಿದ್ದರು. ಇವರು ಬದುಕಿನುದ್ದಕ್ಕೂ ಹಲವು ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ರಾಜಿ ಇಲ್ಲದೆ ಬದುಕಿ, ಬರವಣಿಗೆ, ಹೋರಾಟ ನಡೆಸಿದರು ಎಂದರು. ಕನ್ನಡ ಸಾಹಿತ್ಯ ಸಾಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ ಅವರು ಸದಾ ಸ್ಮರಣೀಯರು ಎಂದು ತಿಳಿಸಿದರು.
ರಂಗಕರ್ಮಿ ಕೆ.ಹೆಚ್. ಕುಮಾರ, ವಿಮರ್ಶಕ ಟಿ. ವೆಂಕಟೇಶಮೂರ್ತಿ, ಕವಿ ಜೇನುಗೂಡು ಊಗಿನಹಳ್ಳಿ ಮಹೇಶ್, ಗುಂಡಿಗೆರೆ ವಿಶ್ವನಾಥ್ ಅವರು ಉಪಸ್ಥಿತರಿದ್ದು ಮಾತನಾಡಿ ಅನಂತಮೂರ್ತಿ ಅವರ ಸಾಹಿತ್ಯ ಸೇವೆ ಸ್ಮರಿಸಿದರು.