ದಾವಣಗೆರೆ, ಡಿ. 25- ತಾಲ್ಲೂಕಿನ ಬಿ. ಕಲಪನಹಳ್ಳಿ ಶರಣ ಬಸವೇಶ್ವರ (ಅಜ್ಜಯ್ಯನ ಮಠ) ಕಲ್ಯಾಣ ಮಂಟಪದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ ನಡೆಯಿತು. ಬೆಳಿಗ್ಗೆ ಶ್ರೀ ಮಹೇಶ್ವರ ಸ್ವಾಮಿಗೆ ಗ್ರಾಮದ ಭಕ್ತಾದಿಗಳು ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಂತರ ಅನ್ನ, ಬೆಲ್ಲ, ಹಾಲು, ತುಪ್ಪ ವಿಶೇಷವಾಗಿ ಬಾಳೆಹಣ್ಣು ಪ್ರಸಾದ ಸೇವಿಸಿದರು. ರಾತ್ರಿ ಅನ್ನ ಸಾರು ಪ್ರಸಾದ ಸಹ ನಡೆಯಿತು. ಬೆಳಗ್ಗೆ ಪುರುಷರ ಜೊತೆಗೆ ವಿಶೇಷವಾಗಿ ಮಹಿಳೆಯರು ಸಹ ಪ್ರಸಾದ ಸ್ವೀಕರಿಸಿದರು.
ಬಿ. ಕಲಪನಹಳ್ಳಿಯಲ್ಲಿ ಮಹೇಶ್ವರ ಜಾತ್ರೆ : ಮಹಿಳೆಯರೂ ಭಾಗಿ
