ಹರಪನಹಳ್ಳಿ,ಡಿ.25. ದಾವಣಗೆರೆಯಲ್ಲಿ ಜನವರಿ 5 ರಂದು ನಡೆಯಲಿರುವ ಭಕ್ತ ಕನಕ ದಾಸರ 537ನೇ ಜಯಂತ್ಯೋತ್ಸವ ಕಾರ್ಯಕ್ರಮ ಮತ್ತು ಸಮಾವೇಶ ಯಶಸ್ವಿಗೊಳಿಸುವಂತೆ ಕುರುಬ ಸಮಾಜದ ಮುಖಂಡರು ಕರೆ ನೀಡಿದರು.
ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡು ಸಮಾಜದ ಬಂಧುಗಳನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ವಿವಿಧ ಗಣ್ಯರುಗಳು ಭಾಗವಹಿಸಲಿದ್ದಾರೆ. ಶೋಷಿತ ಸಮುದಾಯಗಳ ಜನಜಾಗೃತಿ ಸಮಾವೇಶ ಜರುಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಅಧ್ಯಕ್ಷ ಬಂಡ್ರಿ ಗೋಣಿಬಸಪ್ಪ ಗೌರವಾಧ್ಯಕ್ಷ ಬಸವರಾಜಪ್ಪ ಉದ್ಘಟ್ಟಿ ಸಿದ್ದಪ್ಪ, ಪುರಸಭೆ ಸದಸ್ಯ ಗಣೇಶ್ ಪೈಲ್ವಾನ್, ಮುಖಂಡರಾದ ಎಚ್. ವಸಂತಪ್ಪ, ಪರಶುರಾಮ್, ಹಾಲೇಕಲ್ಲು ಎಸ್.ಟಿ ಅರವಿಂದ್, ಜಯಣ್ಣ, ಶಿವಣ್ಣ ಮಾಸ್ಟರ್, ಇಟ್ಟಿಗುಡಿ ಮಂಜುನಾಥ್, ಪ್ರಕಾಶ್ ಎಚ್. ಎನ್, ವೈ. ಮಂಜುನಾಥ್, ವೀರೇಶ್, ಲಿಂಗರಾಜ್, ಬಿ, ಶಿವಪುತ್ರ ಸೇರಿದಂತೆ ಇತರರು ಇದ್ದರು.