ಮಲೇಬೆನ್ನೂರು ಪಿಎಸಿಎಸ್ ಅಧ್ಯಕ್ಷರಾಗಿ ಬಿ.ಸೈಫುಲ್ಲಾ

ಮಲೇಬೆನ್ನೂರು ಪಿಎಸಿಎಸ್ ಅಧ್ಯಕ್ಷರಾಗಿ ಬಿ.ಸೈಫುಲ್ಲಾ

ಮಲೇಬೆನ್ನೂರು, ಡಿ.21- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಸೈಫುಲ್ಲಾ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಅವರು, ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಘದ ಸಿಇಓ ಸಿದ್ದಪ್ಪ ಅವರು ಸಹಕರಿಸಿದರು.

ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಮ್ಮ, ನಿರ್ದೇಶಕರಾದ ಜಿ.ಮಂಜುನಾಥ್ ಪಟೇಲ್, ಕೆ.ಪಿ.ಗಂಗಾಧರ್, ಎಂ.ಬಿ.ಗುಲ್ಜಾರ್, ಸಿ.ಅಬ್ದುಲ್ ಹಾದಿ, ಪಿ.ಆರ್.ಕುಮಾರ್, ಯುನೂಸ್, ಶ್ರೀಮತಿ ರೇವಮ್ಮ ಪುಟ್ಟಪ್ಪ, ಎ.ಕೆ.ನರಸಿಂಹಪ್ಪ ಹಾಜರಿದ್ದು,  ಅವಿರೋಧ ಆಯ್ಕೆಗೆ ಸಮ್ಮತಿ ಸೂಚಿಸಿದರು.

error: Content is protected !!