ಬಲಿತ ಕಾಯಿ ಉದುರಿತು ಮರದಿಂದ
ಭೂತಾಯಿ ಗರ್ಭಸೇರಿ ಹೊರಬಂದ
ಮೊಳಕೆ ಗಿಡವಾಗಿ ಮರಬೆಳೆದು
ಹೂ ಹಣ್ಣು ಕೊಡುತಾ, ಪ್ರಾಣಿ ಪಕ್ಷಿಗಳಿಗೆ
ಉಣಿಸುತಾ, ಬಂತು ಹೆತ್ತಾ ತಾಯಿಯಂತೆ
ನೆರಳು ಹಬ್ಬಿ ವನ್ಯ ಜೀವಿಗಳಿಗೆ
ಆಶ್ರಯ ನೀಡುತಾ, ನಡಿತಾ ಬಂತು
ವನಿತೆ ವಯೋವೃದ್ಧರಾದರೂ
ಮನುಜರ ಮನ ನೋವಾಗೆ
ಬೋಳಾಯಿತು ವನ
ಚಿಪ್ಕೋ ಚಳುವಳಿ ಮರಗಳ
ಅಪ್ಪುಗೆ ಒಡ್ಡಿತು ತಡೆ ಕೆಲಕಾಲ
ಭೂ ಸವಕಲು, ಕಬ್ಬಿಣಾಂಶದ ಕೊರತೆ
ರಕ್ತ ಹೀನತೆ ಹಾಳು ಮಾಡಿತು ವನ.
ಡಾ. ಡಿ.ಸಿ. ನಾಯ್ಕ್