ಕಲಿಕೆಯ ಭೂಮಿಕೆ

ಒಮ್ಮುಖ ಕಲಿಕೆಯ ಧಾವಂತಕೆ
ಕಲಿಯಲು ಯಾವ ಭೂಮಿಕೆಯಾದರೇನು?
ಅಪ್ಪನ ಬಯಲ ಶಾಲೆಯೊಳಗೆ
ಕಡು ಕಷ್ಟದ ಕಸುಬಿನ ಜೊತೆ ಜೊತೆಯಲಿ
ಕಲಿಯ ಹೊರಟಿರುವೆ ಹೊತ್ತಿಗೆಯ
ಅಕ್ಷರಗಳೊಂದಿಗೆ ಅಕ್ಷಯದ ಜ್ಞಾನವ.

ಉಳ್ಳವರ ಅದ್ದೂರಿ ಕಲಿಕೆಯ
ಕಲ್ಪನೆಯಾದರು ನನಗೇಕೆ?
ಪ್ರತಿದಿನವೂ ಬಡತನವ ತೂಗಿ ತಬ್ಬಿ
ಮಲಗುವ ನನಗೆ ಅರೆಹೊಟ್ಟೆಯ
ಸಂಕಟದಿ ಛಲವು ಸದ್ದಿಲ್ಲದ ಮನದೊಳು
ಅಬ್ಬರಿಸಿ ಸಾಗುತಿದೆ ಶಿಕ್ಷಣಯಾನದ
ಅರಿವಿನ ಪಯಣ ಕಲಿಕೆಯ ಬೆನ್ನೇರಿ.

ಕಲಿಕೆಯು ಮುಮ್ಮುಖದಿ ಸಾಗುತಿರಲು
ಗೆಲುವಿನ ಹಾದಿಯ ಹಿಡಿದೇ ಹಿಡಿಯುವೇ
ಅಪ್ಪನೊಮ್ಮೆ ಸುಖದ ಸಿಂಹಾಸನದಲಿ
ಕೂರಿಸುವ ಕನಸು ನನಸಾಗುವ ದಿನಕೆ
ಕಾದು ಕೂರುವ ಕ್ಷಣದಿ
ಒಮ್ಮಲೇ ನನಪಿನಂಗಳದಿ ಸುಳಿವುದು ಈ
ನನ್ನ ನೈಜ ಕಲಿಕೆಯ ಭೂಮಿಕೆ.


ಅಂಶು ಬೆಳುವಳ್ಳಿ
ಮಾಡೆಲ್ ಶಾಲೆ ಜಾವಗಲ್
[email protected]

error: Content is protected !!