ತಾಯ್ತಂದೆಯರ ಕೀಳಾಗಿ
ಕಾಣಬೇಡವೋ ಮೂಢನೇ
ತಾಯ್ತಂದೆಯರಿಂದಲೇ ಜಗಕ್ಕೆ
ಬಂದಿರುವೆಂಬುದನು ಮರೆಯಬೇಡ.
ಬಹು ಭಾಷೆಗಳ ಕಲಿತಿರುವೆಂದು
ಗರ್ವ ಪಡದಿರು ಹೇ ಮೂರ್ಖನೇ
ಮನದ ಭಾವನೆಗಳ ಅಭಿವ್ಯಕ್ತಿಗೆ
ಮಾತೃಭಾಷೆಯೇ ಬೇಕು ಮರೆಯಬೇಡ.
ಆಸ್ತಿ ಅಂತಸ್ತು ಅಧಿಕಾರ ಬಂದೊಡನೆ
ಆಸ್ತಿ ಮದವೇರಿದಂತಾಗದಿರು ಪೆದ್ದನೇ
ವಸ್ತುಗಳ ಮೋಹದಿ ಸಂಬಂಧಗಳ ಮರೆತರೆ
ಅಸ್ಥಿಯಾಗುವೆ ಕೊನೆಗೆ ಮರೆಯಬೇಡ.
ಗುರು ಹಿರಿಯರು ಹೇಳಿದ ಮಾತುಗಳನು
ಗೌರವದಿ ಪಾಲಿಸದಿದ್ದರೆ ಹೆಡ್ಡನೇ
ಹರನ ಕೃಪೆಯಿಂದ ವಂಚಿತನಾಗುವೆ
ನೀರ ಮೇಲಣ ಗುಳ್ಳೆಯಂತಾಗುವೆ ಮರೆಯಬೇಡ.
ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
shivamurthyh2012@gmail.com