ಅಯೋಧ್ಯಾ – ನವ ಅಧ್ಯಾಯ

ಸನಾತನ ಧರ್ಮದ ಹಿಂದೂಸ್ತಾನವು
ಸರ್ವ ಧರ್ಮದ ಮೇರು ಸಂಸ್ಥಾನದಲಿ
ಭರತ ಪುಣ್ಯ ಭೂರಮೆ ಮಡಿಲಲ್ಲಿ
ಸಂಸ್ಕೃತಿ- ಸಂಸ್ಕಾರದ ಪ್ರತೀಕಾಲಯವು | 

ಇತಿಹಾಸದ ಪುಟ ಪುಟದ ಸಾರದಲಿ
ಪುರಾಣ- ಪುಣ್ಯ ನೀತಿಯ ಕಥೆಯು
ಸ್ವರ್ಣ ಭೂಮಿ- ತಪೋಭೂಮಿ ತರಂಗ
ದೈವ ಸಂಭೂತ ರಾಮ ಜನ್ಮದಂತರಂಗ ||

 ಶತಶತಮಾನದ ಇತಿಹಾಸದ ಪುನರುತ್ಥಾನವು
ಧರ್ಮ ಸಂಸ್ಥಾಪನಾ ಮಹಾ ಕಾಯಕವು
ತ್ರೇತಾಯುಗದ ಜಗದೋದ್ದಾರಕರ ಜನ್ಮಭೂಮಿ
ಅಯೋಧ್ಯಾ ರಾಮ ಮಂದಿರ ಭೂಮಿ ಪೂಜೆಯು |

ಬಿದಿಗೆಯ ಬುಧವಾರ ಅಭಿಜನ್ ಲಗ್ನದಲಿ
ಐತಿಹಾಸಿಕ, ಚರಿತ್ರೆ ನಿರ್ಮಾಣದ ಆರಂಭವು
ಭಕ್ತ ಮಹಾಗಣಗಳ ಮಹಾನ್ ಕಾಯಕವು
ದಶರಥ ನಂದನ ಶ್ರೀರಾಮ ಮಂದಿರವು ||

ಧರ್ಮ ಧರ್ಮದ ನಡುವೆ ಅರಳದ ಮನವು
ನ್ಯಾಯಾಂಗ ಕಟ್ಟೆಯೇರಬೇಕಾಯಿತು ನ್ಯಾಯಕ್ಕೆ
ಅಗಣಿತ ಗುಣಗಣ- ಸಜ್ಜನಪಾಲಕ ಶ್ರೀರಾಮ
ನ್ಯಾಯ- ನೀತಿ, ಸತ್ಯ, ಧರ್ಮದ ಜಯಜಯರಾಮ |

ಸಂಸ್ಕೃತಿ- ಸಂಸ್ಕಾರ ಉಳಿಸುವ ಸುಮನಸು
ನನಸಾಗುತಿಹುದಿಂದು ರಾಮಭಕ್ತರೇಲ್ಲರ ಕನಸು
ಮರ್ಯಾದಾ ಪುರುಷೋತ್ತಮನ `ಅಯೋಧ್ಯಾ ಮಂದಿರ’
ಅಪ್ರತಿಮ ಭವ್ಯ ಕಲಾಕೃತಿ ಬಲು ಸುಂದರ ||
ಅಯೋಧ್ಯಾ – ನವ ಅಧ್ಯಾಯದ ಪ್ರಾರಂಭವಿಂದು | ಜೈ ಶ್ರೀ ರಾಮ್ ||


ವೀಣಾ ಕೃಷ್ಣಮೂರ್ತಿ
ದಾವಣಗೆರೆ.

 

error: Content is protected !!