ಅಣ್ಣ ತಂಗಿಯರ ಅಕ್ಕ ತಮ್ಮಂದಿರ ಮಧುರವಾದ
ಬಾಂಧವ್ಯವು ಒಬ್ಬರಿಗೊಬ್ಬರು ಪ್ರೀತಿಯ ಹಂಚುವ
ಇದುವೇ ರಕ್ಷಾ ಬಂಧನವು.
ಶ್ರಾವಣ ಮಾಸದ ಹುಣ್ಣಿಮೆ ದಿನವು
ಆಚರಿಸುವರು ಹಬ್ಬವನು ಸವಿಯನು ಮೆಲ್ಲುತ
ಸಿಹಿಯನು ಹಂಚುತ ಪಡೆವರು ಸುಖ ಸಂತೋಷವನು.
ತಂಗಿ ಅಣ್ಣನಿಗೆ, ಅಕ್ಕ ತಮ್ಮನಿಗೆ
ರಕ್ಷೆಯ ರಾಖಿಯ ಕಟ್ಟುವರು ಸಂತೋಷದಲಿ
ಸೋದರರಿಂದ ಪ್ರೀತಿಯ ಉಡುಗೊರೆ ಪಡೆಯುವರು.
ಸೋದರ ಸೋದರಿ ಬಾಂಧವ್ಯವದು
ಜನುಮ ಜನುಮದ ಈ ನಂಟು ಪ್ರೀತಿ ವಾತ್ಸಲ್ಯವ
ಬೆಸೆಯುತಲಿಹುದು ರಕ್ಷಾಬಂಧನದ ಗಂಟು.
ತಮ್ಮ ಸೋದರರ ಏಳ್ಗೆಯ ಬಯಸಿ ಸೋದರಿಯರು
ಶುಭ ಕೋರುವರು ನೂರು ಕಾಲ ಸುಖವಾಗಿರಲೆಂದು
ಹರಸುತಲಿ ಹಾರೈಸುವರು.
ಜಿ.ಎಸ್.ಗಾಯತ್ರಿ
ಶಿಕ್ಷಕಿ, ಬಾಪೂಜಿ ಶಾಲೆ
ಹರಿಹರ.