ಕರುನಾಡಲ್ಲಿ ಹುಟ್ಟಿ ಬೆಳೆದು
ಪರಭಾಷೆಗೆ ಮೋಹಗೊಂಡು
ಮಾತನಾಡಲೇತಕೆ ಅಂಜುವೆ
ಎಲೈ ಮರೆಯದಿರು ಕನ್ನಡವ…
ಕನ್ನಡಮ್ಮನ ಋಣ ತೀರಿಸಲು
ಸಿಕ್ಕಿರುವೊಂದು ಅವಕಾಶವನು
ತಿರಸ್ಕರಿಸದೆ ಕೈಗೆತ್ತಿಕೋ ಮೂಢ
ಎಲೈ ಮರೆಯದಿರು ಕನ್ನಡವ…
ಮಲೆನಾಡ ಮಡಿಲಲ್ಲಿ ಜನಿಸಿ
ಮನುಜಮತ ವಿಶ್ವಪಥವೆಂದು
ಎಲ್ಲರೂ ಒಂದೇ ಎಂದು ಕರೆದಿಲ್ಲವೇ
ಎಲೈ ಮರೆಯದಿರು ಕನ್ನಡವ
ನಾನಾ ವೇಷ ನಾನಾ ಭಾಷೆ ಕಲಿತು….
ಮಾಸ್ಟರ್ ಗೌಡ
hanugowdakp@gmail.com