ಬೇರು

ಬೇರು ಬೇರಾದರೆ ಉಳಿದ ಉತ್ಪತ್ತಿಗೆ
ಬೇರೆ ನೆಲೆಯುಂಟೇ
ಬೇರೊಂದು ಅಸ್ತಿತ್ವಕ್ಕೆ  ಬೇಕಿಲ್ಲವೇ ಹಳೆ
ಬೇರಿನಾ ಋಣಾನುಬಂಧ!
ಬೇರು ಕಳಚಿಕೊಂಡು ಬಂದೆವೆನ್ನುವರು
ಬೇರೊಂದು ನಾಡಿಗೆ ವಲಸೆ ಬಂದವರು
ಬೇರೆ ಮತ್ತೊಂದು ಅರಿವಿಲ್ಲ ಅವರಿಗೆ
ಬೇರಿನಂಶವೊಂದು ತಮ್ಮೊಡನೆಯೇ
ಸಾಗಿಬಂದಿಹುದೆಂದು
ಬೇರೆಯಾಗುವ ಶಕ್ತಿ ಬಂದಿತೆಲ್ಲಿಂದ
ಬೇರು ಕಟ್ಟಿಟ್ಟ ಬುತ್ತಿಯದು ನಿನಗೆ
ಬೇರೆ ಸಮಯಕ್ಕೆ ಬೇಕಾದೀತು
ಬೇರೊಂದು ದಾರಿ ತೋರದಂದು!


ಅಣ್ಣಾಪುರ್ ಶಿವಕುಮಾರ್, ಲಿಬರ್ಟಿವಿಲ್
ashivakumar@yahoo.com

error: Content is protected !!