ಕೊರೊನಾ ಸವಾಲ್

ಪ್ರತೀ ಮಾನವೀಯ ಸಂಸ್ಕೖತಿಯಲ್ಲಿ
ಹಿರಿಯರು, ಕಿರಿಯರು, ಅನ್ಯರೂ ಸಹ
ತಪ್ಪು ಎಸಗಿದಾಗ ಹಾರಾಡುವ ಸಾಮಾನ್ಯ
ಬೈಗುಳ ಬಾವುಟ ಎಂದರೆ…..ಎಂದರೆ….
ಹೊಟ್ಟೆಗೆ ಏನ್ ತಿಂತಿಯೋ?
ಹೌದಲ್ವೇ?
ಕೊರೊನದಿಂದಾಗಿ
ಪ್ರಪಂಚದ ಸಹ ಜೀವನ
ಸಹಬಾಳ್ವೆ, ಸೇರಿ ಕೂಡಿ ಬಾಳ್ವೆ, ಅಪ್ಪುಗೆಗೆ
ಆದಂತಹ ನಷ್ಟಕ್ಕೆ ಪ್ರತೀಕಾರವಾಗಿ
ಚೀನಾಕ್ಕೆ ಹೊಟ್ಟೆಗೆ ಏನ್ ತಿಂತೀರೀ ?
ಎಂದು ಬೈದು ಪ್ರಶ್ನಿಸಬಹುದೇ ?
ಪಾಪಿ ಪೇಟ್ ಕಾ ಸವಾಲ್ ಅಂತೂ ಅಲ್ಲ.
ಪಾಪದ ಸ್ಥಾನಕ್ಕಾಗಿ ಬಲಿಷ್ಠರ, ಬಲಾಡ್ಯರ
ಕಗ್ಗೊಲೆಯ ಕೊರೊನಾ ಸವಾಲ್…


ಕೆ.ಸಿರಾಜ್ ಅಹಮ್ಮದ್ 
ಜಿಲ್ಲಾ ಕ.ಸಾ.ಪ.ಸಂಚಾಲಕರು, ಸಂತೇಬೆನ್ನೂರು.
[email protected]

error: Content is protected !!