ಸ್ತ್ರೀ ಈ ಸಮಾಜದಲ್ಲಿ ಆಹಾರವೋ, ವರವೋ..
ಇದಕ್ಕುತ್ತರ, ಸಮಾಜದ ದಿನನಿತ್ಯದ ಆಗುಹೋಗುಗಳಲ್ಲೇ ಕಾಣಿಸುತ್ತಿದೆ
21ನೇ ಶತಮಾನದಲ್ಲೂ ಈ ಪ್ರಶ್ನೆ ಕಾಡುತ್ತಿರುವುದು ವಿಪರ್ಯಾಸವೇ ಸರಿ
ಮಹಿಳಾದಿನಚಾರಣೆಗಷ್ಟೇ ಸ್ತ್ರೀಯರಿಗೆ ಎಲ್ಲಿಲ್ಲದ ಗೌರವ, ನಮನ
ಉಳಿದೆಲ್ಲಾ ದಿನ ಆಕೆ ಮುಜುಗರ, ಭಯ, ಅನುಮಾನಕ್ಕೇ ಬಲಿ.
ಜೀವಕ್ಕೇ ಲಿಂಗವಿಲ್ಲ, ದೇಹಕ್ಕೆ ಮಾತ್ರ, ಮತ್ತೇಕೆ ಈ ತಾರತಮ್ಯ?
ಸ್ತ್ರೀ ಎಂದರೆ ಆಕೆ ಅವಿನಾಶಿ,
ಆಕೆ ಸಂಜೀವಿನಿ, ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ…
ಆದರೆ ಕೆಲ ಮಾನಸಿಕ ರೋಗಿಷ್ಟರ ಶೋಷಣೆಗೆ ನಡುಗಿದ್ದಾಳೆ.
ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ, ಸಹನ
ಭೂಮಿತೂಕದ ತಾಳ್ಮೆಯ ಶಕ್ತಿಗಳ ಸಮಾಗಮವೇ ಸ್ತ್ರೀ…
ಹೃದಯದಿಂದ ಆಲೋಚಿಸಿ, ಪಲಿತಾಂಶ ಅಂತರಾತ್ಮಕ್ಕೆ ಬಿಡಿ
ಸ್ತ್ರೀ ಈ ಸಮಾಜದಲ್ಲಿ ಆಹಾರವೋ, ವರವೋ…???
ನೀಮಾ ಡಿ.ಆರ್.
ಇಂಗ್ಲಿಷ್ ಉಪನ್ಯಾಸಕರು,
ದಾವಣಗೆರೆ.
[email protected]