ಮನದಟ್ಟು

ಒಮ್ಮೆಯೂ ಕೂಡ ಹೇಗಿರುವಿರೆಂದು
ಒಂದು ಕರೆ, ಸಂದೇಶ ಮಾಡದವರಿಂದು
ಒಮ್ಮಿಂದೊಮ್ಮೆಲೆ ಮೈಗೊಡವಿರುವವರು
ಒಂದೇ ದಿನವೇ ಹತ್ತಾರು ಬಾರಿ ಮಾತನಾಡುವರು.

ನಮಗೂ ಈಗೀಗಿವರ ಬಗ್ಗೆ ಆಶ್ಚರ್ಯವೂ
ನಮ್ಮವರೇ ಇವರೇನೆಂಬುವ ಅನುಮಾನವು
ಅವರೇನೋ ಅಂತರ್ಜಾಲದಿ ಬರೆದಿರುವಂತೆ
ನಾವದನ್ನು ಮೆಚ್ಚಿ, ಪ್ರತಿಕ್ರಿಯಿಸಲೇಬೇಕಂತೆ.

ಅವರಿಗೆ ಮೆಚ್ಚುಗೆ ಪ್ರತಿಕ್ರಿಯೆಗಳ ಹುಚ್ಚು
ಅವರ ಸಂದೇಶದಿಂದ ಹಿಡಿದಿದೆಮಗೂ ಹುಚ್ಚು
ಭಾವ ಜೀವಿಗಳೇ ಬೇಡುವುದನು ಬಿಟ್ಟುಬಿಡಿ
ಕವನದಲ್ಲಿ ಸತ್ವವಿದ್ದರೆ ಹರಿಸುವೆವು ಮೆಚ್ಚುಗೆ ಕೋಡಿ.

ಕವನಕ್ಕೆ ಅಂಕೆ ಸಂಖ್ಯೆಗಳೇ ಮಾನದಂಡದ ಚೌಕಟ್ಟು
ಕವಿಯ ಭಾವನೆಗಳಿದುವೆ ಕೊಡಲಿಯ ಪೆಟ್ಟು
ಅನ್ಯರ ಕೈಗೇಕೆ ಕೊಡುವಿರಿ ನಿಮ್ಮಯ ಜುಟ್ಟು
ಧನ್ಯತಾಭಾವ ಅರ್ಥವಾಗಲಿಂದು ಮನದಟ್ಟು.


ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
9740050150
[email protected]

error: Content is protected !!