ಬಲಿಯದಿರಲಿ ಭ್ರಷ್ಟ ವೃಕ್ಷ

ಭ್ರಷ್ಟತೆಯ ಬೇರು
ಭುವಿಯಾಳಕ್ಕೆ ಇಳಿದು
ಬಗೆಬಗೆಯಲಿ ಹರಡಿ
ಚಾಚಿದೆ ಜಗದಗಲ ಕಬಂಧ ಬಾಹು.

ದಿಕ್ಕು ತೋಚದೆ ರಾಜಿ ಸೂತ್ರದಿ
ಅನಿವಾರ್ಯದಿ ಮನುಕುಲ
ವಿಷಗಾಳಿಯ ಕುಡಿದು
ಉಸಿರುಗಟ್ಟಿದೆ ಬದುಕು.

ಕಟ್ಟಲು ಕೂತರೆ
ಹಿಡಿದೀತು ಬಲು ದಿನ
ಇನ್ನಾದರೂ ಎಚ್ಚೆತ್ತು
ಎದ್ದು ನಿಲ್ಲಲಿ ಮೂಕ ಜನ
ಕೆಡವಿ ಬಿಡಲಿ ಬುಡ ಸಮೇತ.

ಹೆಮ್ಮರವಾದರೆ ಅಗೆಯಬೇಕಾದೀತು
ಇಡೀ ಭುವನವನ್ನೇ
ಸುಟ್ಟು ಬಿಡುವುದೇ ಒಳಿತು.

ಬೆದರಿ ಬಿಡಲಿ ಅನ್ಯ ವಿಷವೃಕ್ಷವೂ
ಆ ಅಗ್ನಿಯ ಧಗೆಗೆ
ಬೆಳೆಯದಿರಲಿ ಭ್ರಷ್ಟವೃಕ್ಷ
ಬಲಿತು ಉದಿಸದಿರಲಿ ಬೀಜ
ಬರೀ ನೆರಳಾಗಿರಲಿ ಬೋಧಿವೃಕ್ಷ.


ಗಂಗಾಧರ ಬಿ.ಎಲ್. ನಿಟ್ಟೂರು
[email protected]

error: Content is protected !!