ಋತುಗಳಿಂದ ಪ್ರಕೃತಿ ಚಂದ…

ಋತುಮಾನದಿಂದ  ಜೀವರಾಶಿಗಳಲಿ ಪ್ರೀತಿಯ ಬಂಧ,
ಋತುಗಳ ರಾಜ ವಸಂತ ತಂದ.

ಎಲ್ಲೆಲ್ಲೂ ಘಮಘಮಿಸುವ
ಹೂಗಳ ಅಂದ, ದುಂಬಿಗೆ ಬೇಕದೇ ಮಕರಂದ.

ಋಷಿ ಮುನಿಗಳ ವೇದಘೋಷ,
ಕರ್ಣಾನಂದ,ಸಜ್ಜನರಿಗೆ ಸುವಿಚಾರ ಚಿಂತನೆ ಬ್ರಹ್ಮಾನಂದ.

ಋಣಾತ್ಮಕ ಚಿಂತನೆಗಳನು ಬಿಟ್ಟು
ಧನಾತ್ಮಕಭಾವಗಳಲಿ ಬದುಕಿದಾಗ ಜೀವನ ಚಂದ.

ಋಣಾನುಬಂಧ ತರುವುದು
ಎಲ್ಲಾ ಸಂಬಂಧ, ಸ್ನೇಹಾನುಬಂಧ.

ಋಣಮುಕ್ತರಾಗಲು, ಭವಭಯ
ದೂರಾಗಲು ಭಜಿಸಬೇಕು
ಶ್ರೀ ಹರಿಯ ಪಾದಾರವಿಂದ….


ಅಪರ್ಣಾ ದೇವಿ
ದಾವಣಗೆರೆ.

error: Content is protected !!