ಜೂನ್ ಅಂದರೆ ಅಂದು
ಶಾಲಾ ಮಕ್ಕಳ ಸಡಗರದಂದು
ಊರು ತುಂಬಾ ಖರೀದಿ
ಪುಸ್ತಕಗಳು, ಲೇಖನ ಸಾಮಗ್ರಿಗಳು,
ಲಂಚ್ ಬಾಕ್ಸ್‌ಗಳು, ಸಮವಸ್ತ್ರ ಗಳು……ಇತ್ಯಾದಿ
ಹೊಸ ತರಗತಿಯ ಹೊಸ ಕಲಿಕೆಯ ದಾಹ
ಶಾಲಾ ಮಕ್ಕಳ ಹೃದಯದಲಿ ತುಂಬಿತ್ತು ಉತ್ಸಾಹ…..
ಜೂನ್ ಅಂದರೆ ಇಂದು
ಮಕ್ಕಳಲ್ಲಿ ಇಲ್ಲ ಸಡಗರವಿಂದು
ಬಂದೆರಗಿದೆ ಕೊರೊನಾ ಮಾರಿ
ತಿರುಗಿ ನೋಡದಂತಾಗಿದೆ ಶಾಲೆಯ ದಾರಿ……
ಮಕ್ಕಳ ಮೇಲೆ ಬೇಡ ಒತ್ತಡ
ಶೈಕ್ಷಣಿಕ ವರ್ಷ ಆರಂಭವಾಗಲಿ ಸ್ವಲ್ಪ ತಡ
ತರಗತಿಗಳು ಆರಂಭವಾಗಲಿ ಆನ್ ಲೈನ್ ನಲ್ಲಿ
ಶಿಕ್ಷಕರು ಮಕ್ಕಳು ಒಂದಾಗಲಿ ಅಂತರ್ಜಾಲದಲ್ಲಿ….
ಹೌದು ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ..
ಆರೋಗ್ಯ ರಕ್ಷಿಸುತ್ತಾ ಕಲಿಸೋಣ ಜ್ಞಾನದ ಕಲೆ……
ಇದರ ಗುರಿ ಒಂದೇ-ಹೆಮ್ಮಾರಿಯ ಓಟ..
ಆನ್ ಲೈನ್ ನಲ್ಲಿ ಮುಂದುವರೆಸುವ ನಮ್ಮ ಮಕ್ಕಳ ಆಟ ಪಾಠ…..
ಡಾ.ಅನಿತಾ ಹೆಚ್.ದೊಡ್ಡಗೌಡರ್
ದಾವಣಗೆರೆ.