ಚಿಂದಿಯುಟ್ಟ ಬಜಾರು

ಕಾಲ ಸನ್ನೆಗಳ ಗಂಟು
ಹೊತ್ತು ಪೇಟೆ ಬಜಾರಿನ ಅಂಗಣಕೆ
ನಲವತ್ತರ ಪ್ರಾಯ ಪೊರೆಬಿಟ್ಟಿರಬಹುದೇ
ಕಳಚಿರಬಹುದೇ.

ಕೊಂಬಿಗಳಾಚೆ ಮನಕೆ ಹಿಡಿದ
ಉಪ ಪ್ರಹಸನ ನೋವು ತುಡಿತದ ಬಾಧೆ
ಮಣ್ಣಿನಪ್ಪಿ ನೀ ಉರಿಗೆ ಹೇಳದೆ ತೆರೆ ಎಳೆದು
ಒರೆಸಿತು, ಕೆಂಡ ರುದ್ರ ಸನ್ನೆ ಮೊಗದಲ್ಲಿ ಅಂಕಣದವರೆಗೆ.

ಸದ್ದು ಅಲಿಸಲೇ ಇಲ್ಲ ಕಿವಿ
ಎಚ್ಚರವಾಗಲೇ ಇಲ್ಲ ನೆತ್ತಿ ಮೇಲೆ
ಹಗೆ ಸಾರುವ ಹಾಗೆ ಝಳಪಿಸುವ ಬಿಸಿಲೇ
ಹೆಜ್ಜೆ ಸರಪಳಿ ಹೆಬ್ಬಾಗಿಲಿಗೆ ಬಿಸಿದುಂಡೆ.

ಹಿಡಿಯುವ ಕೈಗಳೇ ಎತ್ತಿ ಆಡಿಸಿ
ಬುಡ ಅಳಿಯುವ ಕಾಲಕ್ಕೆ ನಾವು ನೀವು
ಹರೆ ಪ್ರಾಯ ನಡ ಬಗ್ಗಿಸಿ
ಕೋಲುವೂರಿ ಗಡ್ಡಕ್ಕೆ ಕೈಕೊಟ್ಟು
ಕೂರಬೇಕಾಗಿದೆ ಗೆಳೆಯ ಎತ್ತ ತೆರಳುವೆ.

ದೂರ ದೇಶಗಳ ಕಾಣದ ಜನ ಸಂದಣಿಗಳ
ಸರಹದ್ದಿನಲ್ಲಿ ಹುಡುಕಬೇಕಿದೆ ಅವನನ್ನು
ಊಹೆಗಳ ಅಡಿಯಲಿ.

ಅಲ್ಲಿಯೂ ಸುಳಿಯದ ಪತ್ತೆ
ಕೆಳಗೆ ಯಾರಿಗೂ ಬೇಡವೇ ಬೇಡ
ಹದಿ ಹರೆಯ ಸುಖಾಸೀನ ಮುದ್ರೆ.

ನನ್ನಂತವರು ಬಲುಭಾರ
ಹೇಳಿದ್ದ ಯಾವ ವಸ್ತುಗಳ ಬಿಸಾಡಲೇ
ಇಲ್ವವಲ್ಲಾ ನಾನೇ ಒಂದು ರೀತಿಯಲ್ಲಿ
ನಿರುಪದ್ರವಿ ಇಷ್ಟು ಸಾಕು.

ಎರಡಕ್ಷರದ ಸುದ್ದಿ ಕೇಳಲು
ಕೇರಿ ಗುಡಿಸಲು ಪಟ್ಟಣಗಳ ನಡುವೆ
ಕಿವಿಗೊಟ್ಟು ಚಿಂದಿಯಂತೆ ಕಾಡುವರ ನಡುವೆ.


ಪ್ರವೀಣ್ ಬಿ.ಎಂ.
ಪಡುವಾರಹಳ್ಳಿ ವಿನಾಯಕ ನಗರ
ಮೈಸೂರು.

 

error: Content is protected !!