ಉಚಿತ ಉಚಿತ ಉಚಿತ…
ವಿಶ್ವಕ್ಕೆ ಕೊರೊನಾ ಬಂದಿದ್ದು ಉಚಿತ
ಎಲ್ಲಾ ರಾಷ್ಟ್ರಗಳಿಗೆ ಆಯಿತು ಇದು ಖಚಿತ
ಕೋವಿಡ್-19 ತಂದಿತು ಕೊರೊನಾ ಉಚಿತ.
ಜಗತ್ತಿಗೆ ಕೊರೊನಾ ತಂದಿತು ವಿಪತ್ತು
ಯಾರೂ ನಿರೀಕ್ಷಿಸಿರಲಿಲ್ಲ ಇಂತಹ ಆಪತ್ತು
ಎಲ್ಲಾ ರಾಷ್ಟ್ರಗಳಲ್ಲಿ ನುಂಗಿತು ಆರ್ಥಿಕ ಸಂಪತ್ತು
ಈಗ ಬೇಕು ಎಲ್ಲರಿಗೂ ವಿವೇಚನಾ ಬುದ್ಧಿಯ ಕಸರತ್ತು.
ಯಾರ ಜೀವನಕ್ಕಿಲ್ಲ ಬದುಕಿನಲ್ಲಿ ಭದ್ರತೆ
ದುಡಿಮೆಯಿಲ್ಲದೆ ಎಲ್ಲರ ಬದುಕಲಿ ಕೂಡಿದೆ ಅಭದ್ರತೆ
ದೂರದ ಅಂತರ ಮಾಸ್ಕ್ ಧರಿಸುವುದೇ ಸುರಕ್ಷತೆ
ಎಲ್ಲರ ಆರೋಗ್ಯಕ್ಕೆ ಇರಲಿ ಸದಾ ಸ್ವಂತ ಸೂಕ್ಷ್ಮತೆ
ಎಲ್ಲ ತಿಳಿದು ಮನುಷ್ಯತ್ವಕ್ಕೆ ನೀಡಿ ಆದ್ಯತೆ.
ಸದ್ಯಕ್ಕೆ ನಾಡಿನಲಿ ಬರಗಾಲ ತಂದಿಲ್ಲ ವಿದ್ಯುತ್
ನಮ್ಮ ವಿಜ್ಞಾನಿಗಳಿಗಿದೆ ಕೊರೊನಾಕೆ ಔಷಧಿ ಕಂಡು ಹಿಡಿಯುವ ವಿದ್ವತ್ತು
ಯಾರೂ ತೋರಿಸಬೇಡಿ ಕೊರೊನಾ ವಾರಿಯರ್ಸ್ ಮೇಲೆ ತಮ್ಮ ಕರಾಮತ್ತು
ಸರ್ಕಾರ, ಪೊಲೀಸ್, ಮಿಲಿಟರಿ ತಿರುಗಿ ತೋರಿಸುವುದು ತನ್ನ ತಾಕತ್ತು
ಎಲ್ಲಾ ಧರ್ಮದವರು ತೋರಿರಿ ಮಾನವೀಯತೆಯ ಮಜಲತ್ತು.
ಜಿ.ಎನ್.ಸುರೇಶ್ ಕುಮಾರ್