ಲಾಕ್ ಡೌನ್ ಮುಗಿಯಿತು ಆದೆವು ನಾವೆಲ್ಲಾ ಮುಕ್ತ ಮುಕ್ತ
ಎಚ್ಚರವಿರಲಿ ನಮ್ಮ ಸುತ್ತ ಪರಿಸರವೆಲ್ಲ ಕೊರೊನಯುಕ್ತ ಯುಕ್ತ
ಭಾವಿಸಿದ್ದೆವು ಬಲು ದೂರದಲ್ಲಿದೆ ಕೊರೊನ ನರ್ತನ
ಇಂದು ಕೇಳಲ್ಪಡುತ್ತಿದೆ ಹತ್ತಿರದಿಂದ ಈ ಆಕ್ರಂದನ
ಕೊರೊನ ಮುಕ್ತ ಮಾಡಲು ಶತಾಯ ಗತಾಯ ಪ್ರಯತ್ನ ನಡೆಯಿತು
ಇನ್ನು ಇದರೊಂದಿಗಿನ ಸಹಬಾಳ್ವೆ ಎಂದು ಮನ ಅರಿಯಿತು.
ಕೈತೊಳೆದು ತೊಳೆದು ಮಡಿಮೈಲಿಗೆ ತಿಳಿದೆವು
ಮಾಸ್ಕ್ ಹಾಕಿ ಮೌನವೇ ಬಂಗಾರ ಎಂದರಿತೆವು
ಮನೆಯಲ್ಲಿಯೇ ಇದ್ದು ಕೌಟುಂಬಿಕ ಬೆಲೆ ಕಂಡೆವು,
ಸಾಮಾಜಿಕ ಅಂತರವಿದ್ದರೂ ಬಂಧು ಬಳಗದ ಸ್ನೇಹ ಪ್ರೀತಿ | ಉಂಡೆವು
ಆದರಿಂದು ಆರ್ಥಿಕತೆ ಶೈಕ್ಷಣಿಕ ಹಾಗು ಸಾಮಾಜಿಕ ಮಟ್ಟಕುಸಿದಿದೆ
ನೈತಿಕ ಹೊಣೆ, ಆತ್ಮ ನಿರ್ಭರದ ಜವಾಬ್ದಾರಿಯ ಗುರಿ| ನಮ್ಮ ಮುಂದಿದೆ.
ವಿಶ್ವದಾದ್ಯಂತ ನಡೆಯುತ್ತಲೇ ಇದೆ ಈ ಮಹಾಮಾರಿಯ
ರುದ್ರ ನರ್ತನ ಆತ್ಮ ಸ್ಥೈರ್ಯವೆಂಬ ಆಯುಧವೊಂದೇ
ಇಂದು ನಮ್ಮ ಬಳಿ ಇರುವ ಸಾಧನ
ಧನಾತ್ಮಕ ಚಿಂತನೆ ಒಳ್ಳೆಯ ಆಹಾರ ವಿಹಾರ ನಮ್ಮದಾಗಲಿ
ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಸೇವನೆ ತಪ್ಪದಿರಲಿ
ಕೊರೊನ ಪೀಡಿತರಿಗೆ ಶಂಕಿತರಿಗೆ ಮನೋಬಲ ನೀಡೋಣ
ಅಪರಾಧಿ ಭಾವನೆ ಅವರಲ್ಲಿ ಬಾರದಂತೆ ಮಾನವೀಯತೆ ಮೆರೆಯೋಣ
ವೈದ್ಯರು ಪ್ರತಿ ರೋಗಿಗೂ ನೀಡೋ ಔಷಧಿ ಸಂಜೀವಿನಿ ಆಗಲಿ ಎಂದು ಪ್ರಾರ್ಥಿಸೋಣ
ಯಾವುದೇ ತೊಂದರೆ ಇಲ್ಲದೆ ಎಲ್ಲ ರೋಗಿಗಳೂ ಗುಣಮುಖರಾಗಲಿ ಎಂದು ಹಾರೈಸೋಣ
ದಿನ ನಿತ್ಯ ನೀತಿ ನಿಯಮಗಳನ್ನು ತಪ್ಪದೇ ಪಾಲಿಸೋಣ
ಸ್ವಯಂ ದೇಹ ಮನ ಆತ್ಮದ ರಕ್ಷಣೆ ಮಾಡಿಕೊಳ್ಳೋಣ.
ಸಕಲ ಜೀವಾತ್ಮರಿಗೆ ಲೇಸಾಗಲಿ ಎಂಬ ಆಶಯ ಮೂಡಿ ಬರಲಿ
ಒಗ್ಗಟ್ಟಿನ ನಿಸ್ವಾರ್ಥ ಮನಸ್ಸಿನ ಪ್ರಾರ್ಥನೆ ನಮ್ಮೆಲ್ಲರದ್ದಾಗಲಿ
ಅಹಂಕಾರಿ ಮನುಕುಲಕ್ಕೆ ಪಾಠ ಕಲಿಸಿದೆ ಎಲೈ ಭಗವಂತ
ಉಳಿದ ಮನುಕುಲವನ್ನು ರಕ್ಷಿಸಿ, ಇರಲು ಬಿಡುನೀ ಜೀವಂತ
ತಮ್ಮ ಜೀವ ಹಾಗು ಜೀವನವನ್ನು ಲೆಕ್ಕಿಸದೆ ಕೊರೊನಾ ರೋಗಿಗಳ ಶುಶ್ರೂಷೆಯಲ್ಲಿ
ತೊಡಗಿರುವ ಸಕಲ ಕೊರೊನಾ ಯೋಧರಿಗೆ ನಮನ…
_________________________________________________________________________________________________________________________________
ಡಾ. ಆರತಿ ಸುಂದರೇಶ್,
ದಾವಣಗೆರೆ