ಎಂಥಾ ಕೊರೊನಾವಯ್ಯ…

ಎಂಥಾ ಕೊರೊನಾವಯ್ಯ ಇದು
ಎಂಥಾ ಕೊರೊನಾವಯ್ಯ
ಎಲ್ಲಿಂದ ಬಂತು ಎಲ್ಲೆಲ್ಲಿ ಹರಡಿತು
ಭಯವ ತರುವ ಇದು
ಎಂಥಾ ಕೊರೊನಾವಯ್ಯ…

ಸುಮ್ ಸುಮ್ನೆ ಹೊರಗಡೆ ಹೋಗ್ಬೇಡಿ
ಕೈಯನ್ನು ಕುಲುಕಬೇಡಿ
ಗುಂಪಾಗಿ ನಿಂತು ಮಾತಾಡ್ಬೇಡಿ
ಎಲ್ಲೆಂದರಲ್ಲಿ ಉಗುಳ್ಬೇಡಿ
ಸ್ವಚ್ಛತೆಯ ನೀವು ಕಾಪಾಡಿ…

ಆರಕ್ಷಕರಿಗೆ ಸಹಕರಿಸಿರಿ
ದಾದಿಯರ, ವೈದ್ಯರ ಸ್ಮರಿಸಿರಿ
ಸರ್ಕಾರದಾದೇಶ ಪಾಲಿಸಿ
ಮನೆಯಲ್ಲೇ ಸಮಯ ಕಳೆಯಿರಿ
ಈ ದೇಶವನ್ನು ಉಳಿಸಿ… ಬೆಳೆಸಿ…


ಎಂಥಾ ಕೊರೊನಾವಯ್ಯ... - Janathavaniಜಿ.ಎಸ್. ಗಾಯತ್ರಿ, ಶಿಕ್ಷಕಿ
ಬಾಪೂಜಿ ಶಾಲೆ, ಹರಿಹರ.

error: Content is protected !!