ಹಳಿ ತಪ್ಪಿದೆ ಕಲಿಕೆ ರೈಲು

ಕ್ಷಣಕೊಂದು ಶಿಕ್ಷೆಯ ಚಣಚಣ ಕಣಕಣ
ಉದುರುವುವು ಕೊರೊನಾ ಪರಿಣಾಮ
ಇಲಾಖೆಯ ಲಾಕ್ ಅಪ್ – ಲಾಕ್ ಡೌನ್
ಆಗುತ್ತಲೇ ಶಿಕ್ಷಣವೇ ಲಾಕಪ್ ಆಗುತ್ತಿದೆ. 

ಮುಂದೆ ಗುರಿ ಹಿಂದೆ ಗುರು ಇರದ
ಆನ್ ಲೈನ್ ಪಾಠ ಕೋವಿಡ್ ಪರೀಕ್ಷೆ
ಅಂಕೆಗೆ ಸಿಗದ ಬರೀ ಅಂಕಗಳ ಸಂಕಲನ
ಭವಿಷ್ಯಕೆ ಬರೀ ವ್ಯವಕಲನ ಭಿನ್ನರಾಶಿಯೇ?

ಏ! ಕೊರೋನಾ ಕಣ್ಣ ಮುಚ್ಚಿ ತೊಲಗು
ಮನೆಯಲಿ ಮಕ್ಕಳು ಇಕ್ಕಳ ಮುಕ್ಕಳ
ಆಗುತಿವೆ; ನಾಳೆ ಶಾಲೆಗೆ ನಾಡಿಗೆ ದೇಶಕೆ
ಮನುಜ ಕುಲಕೆ ಇಡೀ ಜೀವಸಂಕುಲಕೆ
ಹಳಿ ತಪ್ಪಿದೆ ಕಲಿಕೆಯ ಚುಕುಬುಕು ರೈಲು.


ಹಳಿ ತಪ್ಪಿದೆ ಕಲಿಕೆ ರೈಲು - Janathavaniಆರ್.ಶಿವಕುಮಾರಸ್ವಾಮಿ ಕುರ್ಕಿ
[email protected]

 

error: Content is protected !!