ಮನೆಗೊಂದು ಮರ ನೆಟ್ಟು
ಊರಿಗೊಂದು ವನ ಬೆಳೆಸಿ
ಪರಿಸರ ಉಳಿಸೋಣ.
ಪ್ರಕೃತಿಯ ಮಡಿಲಲಿ ನಲಿಯೋಣ
ಪರಿಸರ ದಿನ ಆಚರಿಸೋಣ
ಪ್ರಕೃತಿ – ಸಂಸ್ಕೃತಿ
ನಮ್ಮ ಬದುಕಿನ ಮೌಲ್ಯಗಳು.
ಕಾಡಿಂದ-ನಾಡು
ನಾಡಿಂದ ನಾವು
ಉಲಿಸೋಣ-ಬೆಳೆಸೋಣ ಪರಿಸರ.
ನಮ್ಮ ಉಳಿವಿಗೆ ಪ್ರಕೃತಿ
ಬಾಳ ಚೆಲುವಿಗೆ ಸಂಸ್ಕೃತಿ
ಪ್ರಕೃತಿ ದೇವರು ಕೊಟ್ಟ ವರ
ಸಂಸ್ಕೃತಿ ಭವ್ಯ ಬದುಕಿನ ವರ
ಉಳಿಸೋಣ ಬೆಳೆಸೋಣ ಪರಿಸರ.
ಪ್ರಕೃತಿ ಮುನಿದರೆ ಮನುಕುಲ ನಾಶ
ಸಂಸ್ಕೃತಿ ಇಲ್ಲದಿರೆ ಬದುಕು ವಿನಾಶ
ಅರಿತು ಬಾಳೋಣ ತಿಳಿದು ನೋಡೋಣ.
ಪರಿಸರ ಜಾಗೃತಿ ಹಮ್ಮಿಕೊಳ್ಳೋಣ
ಸ್ವಚ್ಛ ಭಾರತ ಅಭಿಯಾನ ಆಚರಿಸೋಣ
ಕಾಡು-ನಾಡಿಗೆ ಬೆಂಬಲಿಸೋಣ
ಬದುಕನು ಬಂಗಾರವಾಗಿಸೋಣ
ವಿಶ್ವ ಪರಿಸರ ದಿನ ಆಚರಿಸೋಣ.
ಜೆಂಬಿಗಿ ಮೃತ್ಯುಂಜಯ
ಕನ್ನಡ ಉಪನ್ಯಾಸಕರು, ದಾವಣಗೆರೆ.