ಮನೆಯಲ್ಲಿ

ಆಟಾವಾ ಆಡುತ್ತಾ ಊಟವಾ ಮಾಡುತ್ತಾ
ಶಾಲೆಗೆ ಹೋಗದೆ ಕಾಲವ ಕಳೆಯೋಣ
ಕೊರೋನಾ ರಜಾ ಮನೆಯಲ್ಲಿ. 

ಓದೋದು  ಇಲ್ವಂತೆ
ಬರಿಯೋದು ಇಲ್ವಂತೆ
ಆಟಾನಾ ಆಡ್ಕೊಂಡು
ಟಿವೀನಾ ನೋಡ್ಕೊಂಡು
ಸುಮ್ಮನೆ ಇರು ಮನೆಯಲ್ಲಿ. 

ಶಾಲೆನೂ ತೆಗೆಯಲ್ಲ
ಪಾಠನೂ ಇಲ್ಲವಲ್ಲ
ಹೋಂವರ್ಕ್ ಸ್ಟಡಿವರ್ಕ್
ಮೊದಲೇ ಇಲ್ಲವಲ್ಲ
ತುಂಟಾಟ ತರ್ಲೆ ಮನೆಯಲ್ಲಿ. 

ಮಕ್ಕಳು ಮನೆಮಂದಿ
ಚೆನ್ನಾಗಿ ತಿಂದುಂಡು
ಕೇಕೆಯ ಹಾಕ್ಕೊಂಡು
ಚೌಕಬಾರ ಆಡ್ಕೊಂಡು
ಎಲ್ಲಾರ ಜೊತೆ  ಮನೆಯಲ್ಲಿ.


ಹೆಚ್.ಕೆ. ಸತ್ಯಭಾಮಾ ಮಂಜುನಾಥ್, ದಾವಣಗೆರೆ. 

error: Content is protected !!