ಎಂತ ಕಾಲ ಬಂತು ನೋಡ್ರಿ….

ಎಂತ ಕಾಲ ಬಂತು ನೋಡ್ರಿ
ತಂದೆ-ತಾಯಿ ಪುಣ್ಯ ನೋಡ್ರಿ
ಹೆತ್ತ ಮಕ್ಕಳು ಮನೆಗೆ ಬಂದ್ರು ನೋಡ್ರಿ
ಅಜ್ಜ-ಅಜ್ಜಿ ಮೊಮ್ಮಕ್ಕಳ ಆನಂದ ನೋಡ್ರಿ
ಎಂತ ಕಾಲ ಬಂತು ನೋಡ್ರಿ
ಮದುವೆಗೆ ಬರಿ ಆದ್ರ
ಮಾಸ್ಕ್ ಮಾತ್ರ ಮರಿಬ್ಯಾಡ್ರಿ
ಊಟ ಮಾತ್ರ ಪಾರ್ಸಲ್ ನೋಡ್ರಿ
ಎಂತ ಕಾಲ ಬಂತು ನೋಡ್ರಿ
ಪ್ರಕೃತಿ ಮಾತೆ ಮುನಿದಳು ನೋಡ್ರಿ
ನಮ್ಮ ಬಾಳ ಗೋಳು ಕೇಳೋರಾರಿ
ಕೊರೊನಾ ಬಂದ್ರೆ ಏನ್ಮಾಡೋದ್ರಿ
ಎಂತ ಕಾಲ ಬಂತು ನೋಡ್ರಿ
ಮದುವೆಗೆ ಮಾತ್ರ ಐವತ್ತು ಜನ ಕಣ್ರಿ
ಸತ್ತರೆ ಇಪ್ಪತ್ತು ಮಂದಿ ಕಣ್ರಿ
ಏನೂ ಒಂದು ತಿಳಿಯುತ್ತಿಲ್ಲ ಕಣ್ರಿ
ಎಂತ ಕಾಲ ಬಂತು ನೋಡ್ರಿ
ಮುಸುಕು ಧಾರಿಗಳು
ಆಗ್ಬಿಟ್ವಿ ಕಣ್ರಿ
ಮುಂದಿನ ಬದುಕು ಹೇಗೋ ಕಣ್ರಿ
ಎಂತ ಕಾಲ ಬಂತು ನೋಡ್ರಿ
ಇರೋತನಕ ಚೆನ್ನಾಗಿರೋಣ ಕಣ್ರಿ
ಪ್ರೀತಿ-ವಿಶ್ವಾಸ ಬೆಳೆಸೋಣ ಬನ್ರಿ
ವಿಶ್ವ ಮಾನವರು ಆಗೋಣ ಕಣ್ರಿ


ಜೆಂಬಿಗಿ ಮೃತ್ಯುಂಜಯ

error: Content is protected !!