ಕೊರೊನಾ-ಕೊರೊನಾ
ಬಂದಿದೆ ಹೋಗುತ್ತದೆ
ಹಿಂದೆ ಪ್ಲೇಗ್, ಕಾಲರ ಬಂದಿತ್ತು
ಊರನ್ನು ಬಿಟ್ಟು ಗುಡಿಸಲಿಗೆ ಹೋದೆವು.
ಆರು ತಿಂಗಳಲ್ಲಿ ಮಾಯವಾಯಿತು
ವಿಜ್ಞಾನಿಗಳು ಮೂಲ ಹುಡುಕುತ್ತಾರೆ
ಬೇಡ ಭಯದ ವಾತಾವರಣ
ಪ್ರತಿ ಕಾಯಿಲೆಗೂ ಮದ್ದಿದೆ.
ಸಮಸ್ಯೆಗೆ ಪರಿಹಾರವಿದೆ
ನಾವು ಎಚ್ಚರ ವಹಿಸಬೇಕು
ನಮ್ಮ ಆಚಾರ-ಆಹಾರ ಬದಲಾಗಬೇಕು
ಭೋಗ ಜೀವನಕ್ಕಿಂತ ಯೋಗ ಜೀವನ ಶ್ರೇಷ್ಠ.
ಭಾರತ ಋಷಿ ಮುನಿಗಳ ದೇಶ
ವಿಶ್ವದ ಪ್ರಾಚೀನ ದೇಶ ಭಾರತ
ರಾಮಾಯಣ ಮಹಾಭಾರತಗಳ ಜನ್ಮಭೂಮಿ
ಶರಣ ಶರಣೆಯರ ನಾಡು ಕರುನಾಡು.
ಕೆ.ಎನ್. ಸ್ವಾಮಿ
ನಿವೃತ್ತ ಉಪನ್ಯಾಸಕರು, ದಾವಣಗೆರೆ