ಓಡ್ಯಾಡ ಬೇಡ ತಮ್ಮ…

ಊರಾಗ ಒಡ್ಯಾಡ ಬ್ಯಾಡ ತಮ್ಮ
ಊರ ಹೊರಗೆ ನಾಲ್ಕು ಮಂದಿಯ ಕೂಡ
ಹರಟೆ ಹೊಡಿಯ ಬ್ಯಾಡ ತಮ್ಮ
ಮೋದಿಯ ಮಾತು ಕೇಳು ತಮ್ಮ
ಮೋದಿ ಲಾಕ್‌ಡೌನ್‌ ಮಾಡಿದ್ದು ನಿನ್ನ ಒಳಿತಿಗಾಗಿ
ಊರ ಒಳಿತಿಗಾಗಿ, ಪಟ್ಟಣದ ಒಳಿತಾಗಾಗಿ ಹಾಗೂ ದೇಶದ ಒಳಿತಿಗಾಗಿ ತಮ್ಮ
ಈ ಕಾಲ ಈರುವುದು ಕ್ಷಣಮಾತ್ರ ತಮ್ಮ
ಅದನ್ನು ಎದುರಿಸಬೇಕು ತಮ್ಮ
ಇಲ್ಲದಿದ್ದರೆ ನೀ ಬೇಗ ಮಣ್ಣಾಗಿ ಹೋಗುತ್ತೀ ತಮ್ಮ
ಅಂತರ ಕಾಯೋ ತಮ್ಮ
ಕೈಗಳನ್ನು ಮೇಲಿಂದ ಮೇಲೆ ತೊಳೆಯೋ ತಮ್ಮ
ಕೆಮ್ಮು, ಸೀನು ಬಂದಾಗ ಕರವಸ್ತ್ರ ಹಿಡಿಯೋ ತಮ್ಮ
ಆರೋಗ್ಯ ಇಲಾಖೆ ಹೇಳಿದ ಎಲ್ಲಾ ಸೂಚನೆಗಳನ್ನು ಪಾಲಿಸೋ ತಮ್ಮ
ಇಲ್ಲದಿದ್ದಲ್ಲಿ ದೇಶಕ್ಕೆ ನೀನೇ ಕಂಟಕ ತಮ್ಮ
ಬೇಗ ಮಣ್ಣಾಗ ಹೋಗುತ್ತಿ ತಮ್ಮ
ಸೆರೆ ಸಿಗಲಿಲ್ಲವೆಂದು ಆತ್ಮಹತ್ಯೆ
ಮಾಡಿಕೊಳ್ಳಬೇಡ ತಮ್ಮ
ಲಾಕ್‌ಡೌನ್ ಮುಗಿದ ನಂತರ ಸಿಗುತ್ತದೆ ತಮ್ಮ
ಇದು ಕ್ಷಣಿಕ ಮಾತ್ರ ತಮ್ಮ
ಕೊರೊನಾ ಹೊಡೆದೊಡಿಸಲು
ಕೊಡುಗೆ ನೀಡು ತಮ್ಮ
ಮುಂದೆ ಒಳ್ಳೆ ಕಾಲ ಬರುವುದು ತಮ್ಮ….


ಸಿದ್ಧಾರ್ಥ ಹುಬ್ಬಳೆಪ್ಪನವರ

error: Content is protected !!