ಹೊತ್ತಿ ಉರಿಯುತ್ತಿದೆ ಒಡಲಿನ ಬಡಿತ
ಏನೆಂದು ಹೇಳಲಿ
ಈ ಪ್ರೀತಿಯ ರೌದ್ರಾವತಾರ
ಅತ್ತು ಕರೆದು ಬರೆದ ನಿನ್ನೆದೆಯ
ಮೇಲೆ ನನ್ನಯ ಭಾವನೆಗಳು
ಚಿತ್ತರಿಸಿದ್ದು ಬೇಡವಾದೀತೆ.
ಸಪ್ತ ಸಾಗರಗಳ ದಾಟಿ
ನಿನ್ನೆದೆಯ ಗುಡಿಯೊಳಗೆ
ಪ್ರೀತಿಯ ಮಂತ್ರ ಪಠಿಸಿದನಲ್ಲ ಗೆಳೆತಿ,
ನಿನ್ನೊಡಲ ಬಡಿತ ಸ್ವೀಕರಿಸಿತೇ ಆ ಸಂದೇಶ? ಗೆಳತಿ,
ಭೋರ್ಗರಿತಿರುವ ಪ್ರೀತಿಗೆ
ನೊರೆ ಹಾಲಿನಂತೆ ನಿನ್ನ ಸಂದೇಶ ಸಿಕ್ಕಿತೇ? ಗೆಳತಿ,
ನಿನಗೆ ನೆನಪೊಂದಿದ್ದರೆ ಸಾಕು,
ನೀ ಮುಡಿಯುವ ಮಲ್ಲಿಗೆ ಹೂವು
ನನ್ನೊಡಲೊಳಗಿನ ಪುಟ್ಟ ಪ್ರೀತಿಯ
ಮೂರ್ತಿಗೆಂದು…
ಆರ್. ಧನರಾಜ್, ಪುಣಬಗಟ್ಟಿ.