ತಿಳಿಯೋಣ ಸತ್ಯ …

ಕಾಲಕ್ಕೆ ತಡೆಗೋಡೆ
ಕಟ್ಟೋರು ಹುಟ್ಟಿಲ್ಲ
ಸೂರ್ಯನ ಬೆಳಕನ್ನು
ತಡೆಯೋರು ನಿಂತಿಲ್ಲ
ಹಗಲು ರಾತ್ರಿಗಳ ಲೆಕ್ಕ
ತಪ್ಪಿಸೋರು ಯಾರಿಲ್ಲ
ಜನನ ಮರಣಗಳ ಮರ್ಮ
ಅರಿತವರು ಯಾರು?
ಇಂದಿಲ್ಲ, ಹುಟ್ಟಲ್ಲ,
ತಿಳಿದವರು ಮುಂದ್ಯಾರು…
ಕಷ್ಟ ಸುಖಗಳು ಎರಡು
ಬರುತಾವೆ ಜೋರು!
ಕನಸುಗಳು ನನಸಾಗದೆ
ಉಳಿತಾವೆ ಚೂರು ಸುಳ್ಳು ಮೋಸದ ಸಂತೆ
ವ್ಯಾಪಾರ ಬಲುಜೋರು!
ಸತ್ಯಕ್ಕೆ ಅವನ ಬಿಟ್ಟು ಸಿಕ್ಕಿಲ್ಲ ಇನ್ಯಾರು…
ಶಾಂತ ಸುಖಜೀವನ
ಸೌಹಾರ್ದತೆಯ ಪಾಠ,
ಎಲ್ಲ ಮತಗಳು ಒಟ್ಟಾಗಿ
ಸಾರುವುದಿದೆ ತಾನೆ ದಿಟ,
ಇದ ತಿಳಿಯಲೊಲ್ಲರು
ಕೆಲಮಂದಿ ಶತಮೂರ್ಖರಾಗಿ,
ಕೊಲ್ಲುತಿಹರು
ಎಲ್ಲದನು ಧರ್ಮಾಂಧರಾಗಿ,
ವಿಶ್ವಪ್ರೀತಿಯ ಬೆಳೆಸೋಣ
ನಾವಿರುವ ಎಲ್ಲೆಡೆ,
ಸಹೋದರತೆಯ ಸಾರೋಣ
ಶಾಂತಿಗಾಗಿ ಎಲ್ಲಡೆ,
ಕಾಣುವುದರಲ್ಲೆಲ್ಲ ಒಳ್ಳೆಯದೇ
ಹುಡುಕೋಣ,
ಕಾಯವನು ಕಾರ್ಯಕ್ಕೆ
ಮೀಸಲಾಗಿಸಿ ಬದುಕೋಣ,
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವವೆನ್ನುವ
ಸಂಕಲ್ಪ ಮಾಡೋಣ.


ಶಿವಾನಂದ್ ಕರೂರ್ ಮಠ್
ದಾವಣಗೆರೆ.
[email protected]

error: Content is protected !!