ಓ ನನ್ನ ಜನನಿ
ನೀ ನನ್ನ ಧಮನಿ
ನಿನ್ನ ಮಗಳಾಗಿ ಹುಟ್ಟಿದ್ದೇ ಧನ್ಯ
ನೀನಿರದೇ ನನಗೀ ಜಗವೇ ಶೂನ್ಯ.
ನಿನ್ನ ಮಡಿಲಲ್ಲಿಯೇ ಮಲಗುವೆ
ನಿನ್ನ ತೋಳಲ್ಲಿ ಬಂಧಿಯಾಗುವೆ
ನೀ ಕೊಡುವ ಸಿಹಿ ಮುತ್ತೇ ಸಂಪತ್ತು
ನೀ ನೀಡುವ ಕೈಯ ತುತ್ತೇ ತಾಕತ್ತು.
ನನ್ನ ಬೆಳೆಸಲು ಸಹಿಸಿರುವೆ ಕಷ್ಟವ
ನಿನ್ನ ಕಷ್ಟವ ಮರೆಸಿ ನೀಡುವೆ ಸುಖವ
ನನ್ಮೇಲೆ ನೂರಾರು ನಂಬಿಕೆಯಿಟ್ಟಿರುವೆ
ನಿನ್ನ ಕನಸು ನನಸಾಗಿಸಿ ಖುಷಿ ತರುವೆ.
ನಿನ್ನ ವರ್ಣಿಸಲು ಪದಗಳೇ ಸಿಗುತ್ತಿಲ್ಲ
ನಿನ್ನಲ್ಲೇ ನನ್ನ ಮರೆತು ಬಿಟ್ಟಿರುವೆಯಲ್ಲ
ನಿನ್ನ ನೆನೆಯಲು ವರ್ಷಕ್ಕೊಂದೇ ದಿನವೇ
ನನ್ನುಸಿರಿನ ಪ್ರತಿಕ್ಷಣವೆಲ್ಲ ನಿನ್ನ ನೆನೆಯುವೆ.
ದಿಶಾ.ಕೆ.ಬಿ.
9ನೇ ತರಗತಿ ವಿದ್ಯಾರ್ಥಿನಿ
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ