ಜಾತಿ ಹೆಸರಲಿ
ನರಕವೇಕೊ ಮನುಜ
ನೀತಿ ಬದುಕಿಗೆ ದುಡಿಯೋ ಅನುಜ
ಮನುಜತೆಯ ಕಟ್ಟು
ಸಂಕುಚಿತವ ಬಿಟ್ಟು
ಇರೋ ನಾಕು ದಿನದ
ಬದುಕನು ನಾರಿಸದೆ ಕಂಪು ಬೀರಿಸು
ಸತ್ತರೂ ಉಳಿವಂತೆ ಗಂಧವಾಗು…
ಸವೆಸು ಮೈಮನ
ಮನುಜತೆಗೆ ಹೊಳಪು ಬರುವಂತೆ !
ದುಡಿವವರ ಕಾಲೆಳೆಯದಿರು
ಕೆಡುಕು ಮನ ಮಾಡದಿರು
ಚಿತ್ತಕೆ ಕಸ ತುಂಬದೆ ರಸ ಚಿತ್ತವಾಗು
ಬದುಕು ಹಸಿರು ಬರೆಯಲಿ.
ಎ ಸಿ ಶಶಿಕಲಾ ಶಂಕರಮೂರ್ತಿ
ಕನ್ನಡ ಭಾಷಾ ಶಿಕ್ಷಕಿ ದಾವಣಗೆರೆ