ಒಬ್ಬ ಕಳ್ಳ…

ಕಳ್ಳತನ ಮಾಡಲೆಂದು ನಡುರಾತ್ರಿ
ಮನೆಗೆ ನುಗ್ಗಿದ
ಸರತಿಯಂತೆ ಅಡುಗೆ ಮನೆಗೆ ಹೋದ
ಮೆಲ್ಲನೆ ಎಲ್ಲ ಡಬ್ಬಿ ತಡಕಾಡಿದ ನೀರು ಉಪ್ಪು
ಬಿಟ್ಟರೆ ಬೇರೆ ಯಾವ ದವಸ, ಧಾನ್ಯಗಳು
ಇರಲಿಲ್ಲ… ಮುಂದೆ  ನಡೆದು
ಮಲಗುವ ಕೋಣೆಗೆ ಬಂದು ನೋಡಿದ
ಹರಿದ ಬಟ್ಟೆಗಳು, ಹರಿದ ಪುಸ್ತಕಗಳು
ತಿರುಗದೇ ಇರುವ ಫ್ಯಾನ್,
ಹಾಸಿಗೆ ಇಲ್ಲದೆ ಝಳದ ತಾಪಕ್ಕೆ ಅರೆ ನಗ್ನವಾಗಿ
ಮಲಗಿರುವ ತಾಯಿ ಮಕ್ಕಳ ಕಂಡು
ನಡುಮನೆಗೆ ನಡೆದ
ಅಲ್ಲಿ ಕುರುಚಲು ಗಡ್ಡ ಮೀಸೆ
ಬಿಟ್ಟು ಹಣೆಮೇಲೆ ಕೈ ಹೊತ್ತು
ಮಲಗಿರುವ ವ್ಯಕ್ತಿಯ
ನೋಡಿ ಇವರು ನನಗಿಂತ
ಬಡವರಿರಬೇಕು, ಮನೆಯಲ್ಲಿ ಏನೂ ಇಲ್ಲ
ಎಂದುಕೊಂಡು ಮೆಲ್ಲನೆ ಹೊರನಡೆದ
ಮಾರನೆ ದಿನ ಬೆಳಗಾಗುವಷ್ಟರಲ್ಲಿ
ಶ್ರೀಮಂತರ ಮನೆಯಿಂದ ಕದ್ದು
ತಂದ ಮನೆಗೆ ಬೇಕಾದ ಸಾಮಗ್ರಿಗಳು
ಬಟ್ಟೆ ಬರೆಗಳು
ಎಲ್ಲಾ ಅಡುಗೆ ಪದಾರ್ಥಗಳನ್ನು ತಂದು
ಲಾಕ್ ಡೌನ್ ಇರುವುದರಿಂದ ಸರ್ಕಾರದವರು
ಕಳುಹಿಸಿದ್ದಾರೆಂದು ಕೊಟ್ಟು ಹೋದ….

ಹರಿಶ್ಚಂದ್ರ ಪತ್ತಾರ್

error: Content is protected !!