ಯಾವಾಗಲೂ ನೀ
ಇರುವಾಗೆಯೆ ಇರು
ಸ್ವಲ್ಪ ಸ್ವಾರ್ಥವ ಕಳಚಿಡು
ಪುಟ್ಟ ಮಗುವಿನಂತೆ ನೀ ಇರು
ಅಹಃ ತೋರಲೆ ಬೇಡ
ಬೇದವ ಮಾಡಲೆ ಬೇಡ
ನಗುತಿರು ನಗಿಸುತಿರು.
ಇರು ನೀ ಇರು
ಅನ್ಯರ ನೋವ ನೋಡಿ
ಮಿಡಿಯುವ ಹೃದಯವಾಗು,
ಜನರ ನಲಿವಿನಲ್ಲಿ
ಜೇನಿನಂತೆ ಒಂದಾಗಿ ಅಮೃತವಾಗು,
ಜ್ಞಾನದ ಜೋತಿಯಂತೆ
ಎಲ್ಲರೂ ಒಂದೆಂಬ ಮಮತ ಮಹಿಯಾಗು.
ಇರು ನೀ ಇರು
ಎಲ್ಲವೂ ನಶ್ವರವೆಂಬುದ ನೆನಪಿಡು
ಕೂಗಿದವನ ಸಹಾಯಕ್ಕೆ
ಹಸ್ತವ ಚಾಚಲು ಮರೆಯದಿರು,
ಬೋಗ ಭಾಗ್ಯಗಳ ಬಿರುಗಾಳಿಗೆ
ಮೈಮರೆತು ಸಿಲುಕದಿರು,
ಮನಸಿನ ಶುದ್ದಿಗೆ ದ್ಯಾನವೆಂಬ
ಸಂಜೀವಿನಿಗೆ ಸಮಯ ಮಿಸಲಿಡು..
ಇರು ನೀ ಇರು
ಭಯದ ಪ್ರತಿಬಿಂಬ
ನೀನಾಗಬೇಡ, ವಸೋದರತೆಯ
ದೀವಿಗೆ ಹಾರಿಸಬೇಡ,
ಎನೂ ಆಗದಿದ್ದರು
ಎನೂ ಮಾಡದಿದ್ದರೂ
ಕುವೆಂಪು ಹೇಳುವಂತೆ ಮೊದಲು
ವಿಶ್ವಮಾನವನಾಗು, ವಿಶ್ವಮಾನವನಾಗು…
ಮಹೇಶ ಎಸ್., ಅಂಚೆ ಇಲಾಖೆ
ದಾವಣಗೆರೆ.