ಎಂತಹ ಚಂದ ಕಾಣ್ಸತಾಳ ನಮ್ಮವ್ವ
ಹುಣ್ಣಿಮೆ ತಂದ್ರನಂತೆ ನೋಡವ್ವ.
ಹಣೆಮ್ಯಾಲೆ ತ್ರಿಪುಂಡ ಭಸ್ಮ
ಅದರೊಳಗೆ ಕುಂಕುಮ ಚಂದ್ರಮ
ಮೂಗಲ್ಲಿ ನೆತ್ತಿನ ಮೂಗುತಿ
ಮೊಗದಲ್ಲಿ ಚಂದ್ರಹಾಸದ ಹಸನ್ಮುಖಿ.
ನೆತ್ತಿಮ್ಯಾಗಳ ಸೆರಗ
ಜಾರಿಸೋದಿಲ್ಲ ಕೆಳಗ
ಕಾಣಿಸ್ತಾಳ ಆಗ
ದೇವತೆಯಂತೆ ಆಗಾಗ.
ನಮಗೆ ಕೊಡುವಾಗ ಜನ್ಮ
ಪಡೆದಳಾಕೆ ಮರುಜನ್ಮ
ಹುಟ್ಟಿಬಂದರೂ ನೂರಾರು ಜನ್ಮ
ಮಾತೃಋಣ ತೀರಿಸಲಾಗದ್ದು ನಮ್ಮ ಕರ್ಮ.
ತೀರಿಸಲಾಗದವಳ ಮಾತೃಋಣ
ಅವಳಮುಂದೆ ನಾವೆಲ್ಲ ತೃಣ
ಇದ ತಿಳಿದರೆ ಒಳಿತು ಕಾಣ
ಇಲ್ಲದಿರೆ ನಾವಾಗುವೆವು ಊರಮುಂದಿನ ಕೋಣ.
ಮನೆ-ಮನಕೆಲ್ಲ ಬೆಳಕ ನೀಡುವ ಬೆಳದಿಂಗಳು
ಮನೆತುಂಬ ಓಡಾಡುವ ದೇವರು
ಇವಳೇ ನಮ್ಮ(ನೆ) ದೇವರು
ಮಾತೃವಾತ್ಸಲ್ಯ ತುಂಬಿದ ದೇವರು.
ಸಾರಂಗ ಮಠದ ಜಗದೀಶ
ವಿಜ್ಞಾನ ಶಿಕ್ಷಕ, ಆದರ್ಶ ಪ್ರೌಢ ಶಾಲೆ
ದಾವಣಗೆರೆ.