ಜೊತೆಗಿದ್ದು ನಂತರ
ಮೈ ಮುರಿದು ಮೇಲೇಳೋ ಬೀಜ
ಮಣ್ಣ ಮರೆವುದೇ…ನಿನ್ನಂತೆ.
ನೂರು ಎಲೆ ಮರದಿಂದ
ಹಾರಿದರೇನು ಒಂದಾದರೂ ಬುಡಕೆ ಬಿದ್ದರೆ
ಧನ್ಯ…. ಮನದಾಸೆಗಳಂತೆ.
ಎಷ್ಟು ಎತ್ತರ ಏರಿದರೇನು
ಮರ ಮಣ್ಣ ಬಂಧ ಬಿಡಲಾದೀತೇ…ನೀ
ನಾ…ಹಾಗೆಯೇ!.
ಬೀಜ ಒಂದೇ
ಸಸಿ ಕಾಂಡ ಮರ ಎಲೆ ಹೂ
ಕಾಯಿ ಹಣ್ಣುಗಳು ಎಷ್ಟೆಲ್ಲಾ ರೂಪಾಂತರ
ನಮ್ಮ ಒಲವ ಧಾರೆಯಂತೆ!.
ಬಳ್ಳಿ ಮರವ ವ್ಯಾಪಿಸಿ, ಆವರಿಸಿ
ಅಪ್ಪಿದಷ್ಟು ಮರ ಭದ್ರ…ಅಷ್ಟೇ!
ಮಣ್ಣೊಂದೇ ಬೀಜಕೆ ಮರವಾಗೋ
ಪರಿಗೆ ಮೂಲ
ಅಲ್ಲ; ಗಾಳಿ ನೀರು ಬೆಳಕುಗಳಂತೆ
ಒಲವಿಗೂ ನೂರು ಮುಖ.!
ಸಂತೆಬೆನ್ನೂರು ಫೈಜ್ನಟ್ರಾಜ್
[email protected]